Verse 1

ಏಳೇಳು ನೆಲದಿಂ
ಪ್ರಕಾಶವಾಗಿರು
ಉಂಟಾಯ್ತು ಶೋಭೆಯಿಂ
ನಿನ್ಮೇಲೆ ಬೆಳಕು.
ಭೂಮೀಲಿ ತುಂಬಾ ಅಂಧಕಾರ.
ಮನುಷ್ಯ ಸೂರ್ಯ ಕಾಣಲಾರ.
ಅಘೋರ ಮೊಬ್ಬು ಕತ್ತಲು
ಭೂಚಕ್ರದಲ್ಲಿ ಸುತ್ತಲು.

Verse 2

ಎಲ್ಲೆಲ್ಲ್ಯೂ ಮುಚ್ಚಿದೆ
ಕಾರ್ಗತ್ತಲಿಳೆಯಂ
ನಿನ್ನಲ್ಲಿ ಮಾತ್ರವೆ
ಅತುಲ್ಯ ಬೆಳಕಂ.
ತಳ್ತಳಿಸುವ ಸ್ವರ್ಗಕಾಂತಿ.
ಪ್ರಕಾಶಿಸುವ ದಿವ್ಯ ಶಾಂತಿ.
ಯೆಹೋವ ತಾನೆ ಕೊಡುತಾ
ನಿನ್ನಲ್ಲಿದ್ದಾನೆ ಸರ್ವದಾ.

Verse 3

ಭೂರಾಜರೆಲ್ಲರು
ಈ ಕಾಂತಿ ನೋಡುತಾ
ನಿನ್ ಹತ್ರ ಬಪ್ಪರು
ಗುಂಪಾಗಿ ಓಡುತ್ತಾ.
ಚೀಯೊನ್ ಕುಮಾರ್ತೆ ಕಣ್ಣು ಎತ್ತು.
ಸಂತೋಷ ಪಟ್ಟು ನೋಡು ಸುತ್ತು.
ಸಮೂಹವೆಷ್ಟೋ ದೊಡ್ಡದು
ಯಾರ್ಯಾರು ಅಲ್ಲಿ ಬರ್ವರು.

Verse 4

ಇಗೋ ಪ್ರವಾಸದಿಂ
ಐತಪ್ಪ ಪುತ್ರರೂ
ಒಪ್ಪುತ್ತ ಶೋಭೆಯಿಂ
ಬಪ್ಪ ಪುತ್ರಿಯರೂ.
ಕೊಂಡಾಡಿ ನಿನ್ನ ನಾಮವನ್ನು
ಸೇರ್ಯಾರು ನಿನ್ನ ಬಾಗಲನ್ನು.
ದ್ವೀಪಾವಳಿಯ ಜನರು
ತಮಾಸ್ತಿ ನಿನಗೀವರು.

Verse 5

ಭೂಲೋಕಧನವು
ನಿನ್ನಲ್ಲಿ ಸೇರುತೆ
ನಿನ್ನೀಶ ಪ್ರೀತಿಯು
ನಿನ್ನಲ್ಲಿ ಊರುತೆ.
ಯೆಹೋವ ತಾನೆ ಸೂರ್ಯನಾಗಿ.
ನಿನ್ನೋಳ್ ಪ್ರಕಾಶವೀಯಲಾಗಿ.
ಸುನೀತಿ ನಿನ್ನಲಾಳಲು
ನಿನ್ನೀಶ ಚಿತ್ತಪೂರ್ತಿಯು.

Go to top