Verse 1

ಏಳೇ ಚಿಯೋನ ಸಭೆ
ಪ್ರಕಾಶಿಸೀಗಲೆ
ಯೆಹೋವನಿಂದ ಪ್ರಭೆ
ನಿನ್ನಲ್ಲಿ ಮೂಡಿದೆ.

Verse 2

ಸಮಸ್ತ ಜನರಲ್ಲಿ
ಕಗ್ಗಾನ ಕಾವಳು
ಸಮಸ್ತ ಪೃಥ್ವಿಯಲ್ಲಿ
ಮಹಾಂಧಕರವು.

Verse 3

ನಿನ್ನೋಜ ಸೇರಿಯಾರು
ನಾನಾ ಜನಂಗಳು
ನಿನ್ನನ್ನು ವಂದಿಸ್ಯಾರು
ಪ್ರಖ್ಯಾತ ರಾಜರು.

Verse 4

ಕಣ್ಣೆತ್ತಿ ಗುಂಪು ನೋಡಿ
ಚೆನ್ನಾಗಿ ಹರ್ಷಿಸು
ಮಹಾ ಸಮೂಹ ಓಡಿ
ಬಂದಡ್ಡ ಬೀಳ್ವದು.

Verse 5

ಬಂದಾರೆ ದೂರದಿಂದ
ಅಗೋ ಕುಮಾರರು
ಬಂದಾರೆ ಶೋಭೆಯಿಂದ
ಕುಮಾರಿತೆಗಳು.

Verse 6

ಹೆಚ್ಚಾದ ಬೆರ್ಗಿನಿಂದ
ನಿನ್ನಕ್ಷಿ ಅರ್ಳೋದು
ಸಂತೋಷಪ್ರಭೆಯಿಂದ
ತುಂಬೋದು ಹೃದವು.

Verse 7

ಸಮುದ್ರ ದ್ವೀಪವೆಲ್ಲ
ಚೀಯೋನಿನಾಸ್ತಿಯೇ
ಭೂಲೋಕ ಪ್ರಜೆಯೆಲ್ಲ
ನಿಂಗೊಳಗಾದದೇ.

Verse 8

ಒಂಟೇ ಸಮುಹದಿಂದ
ಸಂದಣಿಯಹುದು
ಆ ಸೇಬ ಸೀಮೆಯಿಂದ
ಹೇಮಾದಿ ತರ್ವರು.

Verse 9

ಅಗೋ ಮಿದ್ಯಾನಿನಿಂದ
ಬಂದಾರೆ ದೂತರು
ಹುಟ್ಟೋದು ಎಲ್ಲರಿಂದ
ಅನಂತ ಸ್ತೋತ್ರವು.

Go to top