Verse 1

ಇಂದು ಹರುಷ
ಕಂದ ಹುಟ್ಟಿದ
ತಂದನೆಮಗೆ ರಕ್ಷಣೆ
ಬಂದ ಆ ಕೂಸು
ಸುಂದರ ಯೇಸು
ವಂದನೀಯ ದೇವಪುತ್ರನೇ.

Verse 2

ಭಕ್ತಿಹೀನರ
ಮುಕ್ತಿ ಸಾಧಿಸ
ರಕ್ತವರ್ಪಿಸಿ ಮಾಡಿದೆ
ಯುಕ್ತ ಉದ್ಧಾರ
ಉಕ್ತ ಪ್ರಕಾರ
ವ್ಯಕ್ತನಾದ ದೇವಪುತ್ರನೇ.

Verse 3

ಜೀವವೆಮಗೆ
ಈವ ಶಿಶುವೆ
ಸಾವಿನಂಜಿಕೆ ನೀಗಿದೆ.
ದೇವಾರಿ ಹಾಳು
ಗೈವ ನೀ ಬಾಳು
ಶ್ರೀ ವಿಜಯ ದೇವಪುತ್ರನೇ.

Go to top