Verse 1

ರಾಜರ ರಾಜನೇ
ದಿವದಿಂದಿಳೆಗೆ ಬಂದಿ.
ದೂತ ಪುಣ್ಯಾತ್ಮರಿಗಲ್ಲ
ನೀ ಪಾಪಿಗೆ ತಂದಿ.
ಶುಭವನ್ನೇ
ವಂದನೆ ರಕ್ಷಕನೇ.
ನಮಗೆ ಭ್ರಾತರರಂದಿ.

Verse 2

ಜೀವಸ್ವರೂಪನೇ
ಆದಿ ನೀ ಸಾತ್ವಿಕ ದಾಸ.
ದೀನರನ್ನೆತ್ತಲು ದೀನರೊಳ್
ಗೈದಿ ನಿವಾಸ.
ನಿನ್ನಿಳಿವು
ನಮಗುದ್ದಾರಣೆಯು.
ನಮಗೆ ನಿತ್ಯ ವಿಲಾಸ.

Verse 3

ಇಹದಿ ಸ್ವರ್ಗದ
ಸೇನೆಗಿಳೀಶನ ಮುಖ.
ನೋಡಿರೀ ನೋಟದಿ ನಿಮಗೆ
ಪರಮ ಸುಖ.
ವಂದಿಸಿರಿ
ನರರೆ ಪ್ರಾರ್ಥಿಸಿರಿ.
ನೀಗುವನೀತನು ದುಃಖ.

Verse 4

ನಿನ್ನನ್ನು ಬಯ್ಸುವ
ಮಂದೆಯ ದರ್ಶಿಸಿ ಮೇಯ್ಸು.
ಸಭೆಯನ್ನೊತ್ತುವ ಶತ್ರು
ಸಮೂಹವ ಜೈಸು.
ಒಡೆಯನೇ
ಹಿಂಸೆ ಉಂಟಾಗುತಲೇ.
ಇತ್ತ ವಾಗ್ಧತ್ತ ಪೂರೈಸು.

Verse 5

ನಿನ್ನ ಪ್ರಸನ್ನತೆ ಯೇಸು
ಅಪೇಕ್ಷಿಸುತ್ತೇವೆ.
ಹರಸು ನಮ್ಮ ನಾವೆಲ್ಲ
ನಿರೀಕ್ಷೆಸಿದ್ದೇವೆ.
ಜೀವಂತನೇ
ಮಿತ್ರ ವಿಮೋಚಕನೇ.
ಹೊಂದು ನಮ್ಮೆಲ್ಲರ ಸೇವೆ.

Verse 6

ಏರಲೀ ಹಬ್ಬದಿ ನಮ್ಮ
ಹೊಸನ್ನ ಹೊಸನ್ನ.
ದಯದಿ ನೀಡು ಈ ಹಸಿದ
ಸಭೆಗೆ ಮನ್ನ.
ಬೋಧಕನೇ
ಶಾಂತಿಯ ಪಾಲಕನೇ.
ಶಿಷ್ಯರಿಗಾಗು ಪ್ರಸನ್ನ.

Verse 7

ಯೇಸುವೇ ಇಹದಿ ನಮಗೆ
ಮಾಡು ಸುಶಿಕ್ಷೆ.
ನಿನ್ನ ಬರೋಣದ ದಿನವು
ನಮ್ಮ ಪ್ರತೀಕ್ಷೆ.
ರಕ್ಷಣೆ ತಾ
ನಮ್ಮ ವಿಮೋಚಿಸ ಬಾ.
ನೀನೊಬ್ಬ ನಮ್ಮ ನಿರೀಕ್ಷೆ.

Go to top