Verse 1

ಯೇಸು ನಿನ್ನ ಅವತಾರ
ಲೋಕಕೆಂಥ ಉಪಕಾರ
ನಿನ್ನ ನೋಡಿ ಲೋಕವು
ದ್ವೇಷ ಮಾಡಿ ತಳ್ಳಿತು.
ನೀನು ಮೌನ ಕುರಿಯಾಗಿ
ಘೋರ ಪೀಡೆ ತಾಳಲಾಗಿ
ನಿನ್ನ ವೇದನೆಗಳು
ಲೋಕವನ್ನು ಗೆದ್ದವು.

Verse 2

ಅಂದು ಲೋಕಪಾಪಕ್ಕಾಗಿ
ನೀನು ಪ್ರಾಯಶ್ಚಿತ್ತವಾಗಿ
ಕ್ರೂಜೆಯೆಂಬ ಪೀಠದಿ
ಶಾಪಬಾಧೆ ತಾಳಿದಿ.
ನಾವು ನಂಬಿ ಬಾಳುತೇವೆ.
ನಿನ್ನ ಶಿಷ್ಯರಾಗಿದ್ದೇವೆ.
ನಿನ್ನ ಶ್ರಮ ಮರಣ
ಪಾಪರೋಗಕ್ಕೌಷಧ.

Verse 3

ಕರ್ತಾ ನೀನಾಲೋಕದಿಂದ
ಶ್ರೇಷ್ಠ ತ್ಯಾಗಗುಣದಿಂದ
ನಮ್ಮ ಲೋಕಕಿಳಿದಿ
ನಮ್ಮ ಸೇವೆ ಮಾಡಿದಿ.
ನೀನು ಪಟ್ಟವನ್ನು ಬಿಟ್ಟು
ನಮ್ಮ ಮೇಲ್ ಕಿರೀಟವಿಟ್ಟು
ಬನ್ನಿ ಪಟ್ಟವೇರಿರಿ
ಎಂದು ಹೇಳುತಿರುತಿ.

Verse 4

ಈ ಅಪೂರ್ವವಾದ ಪ್ರೀತಿ
ಇಂಥ ಚೋದ್ಯವಾದ ನೀತಿ
ನೋಡಿ ಮುಕ್ತಿ ಕಾಣಲು
ನಿನÀಗಡ್ಡ ಬೀಳ್ವೆವು.
ಯೇಸು ನಿನ್ನ ಹಾಗೆ ಯಾರು?
ನಿನ್ನನರಿತವರಾರು?
ನಿನ್ನ ವೇದನೆಗಳು
ನಮ್ಮ ಮನ ಗೆದ್ದವು.

Go to top