Verse 1

ದೇವ ಸ್ತೋತ್ರವಾಗಲಿ
ನುಡಿದ್ದನ್ನು ನಡಿಸಿ
ಪಾಪೋದ್ಧಾರಕ್ಕಾತನು
ರಕ್ಷಾವೀರನ್ನಿತ್ತನು.

Verse 2

ಪೂರ್ವ ಭಕ್ತಜನರ
ಕಾಲಜ್ಞಾನವಚನ
ಪ್ರಾರ್ಥನೆ ನಿರೀಕ್ಷೆಯು
ಎಲ್ಲಾ ನೆರವೇರಿತು.

Verse 3

ಅಬ್ರಹಾಮಕಾಂಕ್ಷೆಯೇ
ಯಕೋಬ್ ವಂಶತಾರೆಯೇ
ಕನ್ಯಾಪುತ್ರ ದೇವಜ
ಚೀಯೋನ್ ಪ್ರಜೇ ರಕ್ಷಕ.

Verse 4

ರಕ್ಷಕ ನೀನೆಮಗು
ಜಯ ಜಯ ಶುಭವು
ನಿಂಗೆ ನನ್ನ ಹೃದದಿ
ಸೇರೋ ಮಾರ್ಗವಾಗಲಿ.

Verse 5

ಸೇರು ಘನರಾಜನೇ
ನನ್ನ ಮನ ನಿನ್ನದೇ
ಪಾಪಮಲ ತೊಳೆದು
ಹೃದದಲ್ಲಿ ವಾಸಿಸು.

Verse 6

ಶಿಕ್ಷೆಗಾಗಿ ಬಾರದೆ
ಆಗ ಶಾಂತಿಯಿಂದಲೆ
ಬಂದ ಹಾಗೆ ಈಗಲು
ಶಾಂತನಾಗಿ ರಕ್ಷಿಸು.

Verse 7

ಯುಕ್ತಿಯಿಂ ಸೈತಾನನು
ನನ್ನ ಹೊಂಚಿ ನೋಡಲು
ಸಾಲದೆನ್ನ ಬಲವು
ಧೈರ್ಯ ನನಗಿಲ್ಲವು.

Verse 8

ಆದಿಶೇಷ ಶಿರಸ್ಸಂ
ತುಳಿದೀಯಭಯವಂ
ವರ್ಧಿಸೆನ್ನ ನಂಬಿಗೆ
ಶರಣಾಗು ನನಗೆ.

Verse 9

ಹೀಗೆ ಜೀವದರಸ
ಪ್ರಭೆಯಿಂದ ಬರುವ
ನಿನ್ನನ್ನೆದುರ್ಗೊಳ್ಳುವೆ
ಮುಕ್ತಿ ಸಿದ್ಧಿ ಹೊಂದುವೆ.

Go to top