Verse 1

ಪಾಪಿಯಲ್ಲಿ ಪ್ರೀತಿ ಇಟ್ಟು
ದಿವ್ಯ ರಜಸ್ಥಾನವಂ.
ಆಗಲಿ ಮೇಲ್ಲೋಕ ಬಿಟ್ಟು
ಯೇಸು ಪಾಪಲೋಕವಂ
ಸೇರಿ ತನ್ನ ರಾಜ್ಯವನ್ನ
ತೆರೆದಿತ್ತನೆಮಗೆ.

Verse 2

ರಾಜನಿಂಗೆ ಮಾರ್ಗವನ್ನು
ಸಿದ್ಧ ಗೈಯು ಸಭೆಯೇ.
ಕ್ರಿಸ್ತನಲ್ಲಿ ಸ್ವರ್ಗವನ್ನು
ಪಡಕೊಳ್ಳಿ ಕ್ರೈಸ್ತರೇ
ಪಶ್ಚಾತ್ತಾಪಪಟ್ಟು ಪಾಪ
ಹೇಸಿ ಸೇರಿರಾತಗೆ.

Verse 3

ಶ್ರೇಷ್ಠ ವೈದ್ಯ ನೀ ಪವಿತ್ರ
ನಿತ್ಯ ಜೀವದಾಯಕ
ಪ್ರೀತಿ ಇಟ್ಟು ನಮ್ಮ ಮಿತ್ರ
ಆದಿ ಆತ್ಮನಾಯಕ
ನರಪ್ರಿಯ ನೀ ಸ್ವಕೀಯ
ರಾಜ್ಯ ಸ್ಥಾಪಿಸೊಡೆಯ.

Go to top