Verse 1

ನಾನೆದುರ್ಗೊಳ್ಳೋದೆಂತು
ಆತ್ಮಾಪ್ತ ನಿನ್ನನೇ?
ಸ್ವೀಕಾರ ಗೈಯೋದೆಂತು
ಸರ್ವಾಶಾಪೂರ್ತಿಯೇ?
ಈಯ್ ಜ್ಞಾನ ಜ್ಯೋತಿಯನ್ನು
ಶ್ರೀ ಯೇಸುಸ್ವಾಮಿಯೇ
ನಿಂಗರ್ಹ ಮಾನವನ್ನು
ನಾನಯ್ಯ ಕೊಡುವೆ.

Verse 2

ಚೀಯೋನಿನೊಳ್ ನೀನಂದು
ಪ್ರವೇಶ ಮಾಡಲು
ಪರ್ಣಪುಷ್ಪಾದಿ ತಂದು
ನಿನ್ನಡಿಗಿಟ್ಟರು.
ನಿನ್ನಾಗಮನಕಾಗಿ
ನಾ ಗೀತ ಹಾಡುವೆ.
ನಿಂಗಿಷ್ಟ ಸೇವೆಗಾಗಿ
ಆರ್ಳೋದು ಮನವೆ.

Verse 3

ಎನ್ನಾತ್ಮ ದೇಹವನ್ನು
ಸಂಕಷ್ಟ ಮುತ್ತಲು
ನೀ ಬಿಟ್ಟಿ ದಿವವನ್ನು
ಸಂತೋಷವೀಯಲು.
ನಾ ಬಿದ್ದ ಪಾಪದಿಂದ
ನೀನೆನ್ನ ಬಿಡಿಸಿ
ನಾ ಬಿದ್ದ ನಿಂದೆಯಿಂದ
ಮಾನಕ್ಕೆ ಎತ್ತಿದ್ದಿ.

Verse 4

ನೀ ಬಿಟ್ಟು ಮೈಮಾಲೋಕ
ಇಳ್ದದ್ದು ಯಾತಕೆ.
ಅಸಂಖ್ಯ ದುಃಖ ಶೋಕ
ಸಂತಪ್ತ ಭೂಮಿಗೆ?
ಅತುಲ್ಯ ಪ್ರೇಮಪೂರ್ತಿ
ನೀ ಬಂದ ಹೇತುವೇ
ನಂಬೀ ವಾತ್ಸಲ್ಯಮೂರ್ತಿ
ಕಂಗಾಲ ಜನವೇ.

Verse 5

ನಿಮ್ಮಘದ ನಿಮಿತ್ತ
ನೀವಂಜಬಾರದು.
ಈ ಸ್ವಾಮಿ ಪ್ರಾಯಶ್ಚಿತ್ತ
ಅದನ್ನು ನೀಗಿತು.
ಸಂತೈಸಿ ರಕ್ಷಿಸೋನು
ಶೋಕಾರ್ತ ಪಾಪಿಯಂ
ಮೋಕ್ಷಕ್ಕೆ ಸೇರಿಸೋನು
ನಂಬಿರ್ದ ಶಿಷ್ಯರಂ.

Verse 6

ದುರ್ವೈರಿ ಕೂಗುವಲ್ಲಿ
ನೀವಂಜೋದೇತಕೆ?
ನಿಮೇಷಮಾತ್ರದಲ್ಲಿ
ನಿಮ್ಮಿಶ ದೊಬ್ಬನೇ?
ಇಗೋ ಬರೋನು ಸರ್ವ
ರಾಜಾದಿರಾಜನು
ಅಂದೆಲ್ಲ ಶತ್ರುಗರ್ವ
ನಿರ್ಮೂಲಗೈವನು.

Verse 7

ಬರೋನು ನ್ಯಾಯಾಧೀಶ
ದುಷ್ಟಾತ್ಮ ಶಿಕ್ಷಿಸ.
ಪ್ರಭಾವದೊಳ್ ಪ್ರವೇಶ
ಸ್ವಜನಕ್ಕೀಯುವ.
ಬಾ ಶೀಘ್ರ ನಮ್ಮಾದಿತ್ಯ
ವೈಯೆಮ್ಮನ್ನೆಲ್ಲರಂ
ಪ್ರವೇಶ ಗೈಯ ನಿತ್ಯ
ಸೌಭಾಗ್ಯವಸ್ತಿಯಂ.

Go to top