Verse 1

ಎಚ್ಚರ.
ಚೀಯೊನ ಸಭೆ
ನಿನ್ನ ಕರ್ತ ಬಪ್ಪನು.
ಆತನತಿಶಯ ಪ್ರಭೆ
ಸ್ಪಷ್ಟವಾಗಿ ಮೂಡಿತು.

Verse 2

ದೃಷ್ಟಿಸು.
ದಿಗ್ಧೇಶದಲ್ಲಿ
ಜನರದ್ದು ನೆರೆದು.
ನಿನ್ನ ಸ್ವಾಮಿ ತೇಜದಲ್ಲಿ
ನಡಕೊಳ್ಳೊತಿಹರು.

Verse 3

ಶೋಭಿಸು.
ನಿನ್ನ ಗೋಡೆಯನ್ನು
ಅನ್ಯರೀಗ ಕಟ್ಟಲು.
ಸಾರ್ವಭೌಮರ್ಯೇಸುವನ್ನು
ನಂಬಿ ಸೇವಿಸುವರು.

Verse 4

ಹರ್ಷಿಸು.
ನಿಂಗೊಲ್ದೇನೆಂದು
ಕರ್ತ ಮಾತು ಕೊಟ್ಟನು.
ಮಾತಿನಂತೆ ನಿನಗೆಂದು
ಅಭಿವೃದ್ಧಿ ತಪ್ಪದು.

Go to top