Verse 1

ನವೀನ ಸಭಾವರ್ಷವು
ಈ ಹೊತ್ತು ಹತ್ತುವಲ್ಲಿ
ಇನ್ನೂ ಸುವಾರ್ತಾಘೋಷವು
ಉಂಟೆಮ್ಮ ಸಭೆಯಲ್ಲಿ
ಕೃಪಾಸಂಧಾನ ದೃಢವು
ವಿಶ್ವಾಸಪಾಯ ಯೇಸುವು
ಹೀಗಿರೆ ಹಿಗ್ಗುತ್ತೇವೆ.

Verse 2

ಚೀಯೋನ ಕುಲಸಭೆಯೇ
ಕೊಡಿಂದು ಘನ ಮಾನ
ಮಹೇಶ ವಿಶ್ವ ಕರ್ತಗೆ
ಮಾಡಿಂದು ಸ್ತೋತ್ರಗಾನ.
ಸದ್ಭಕ್ತರೊಂದಿಗೆಮ್ಮನು
ಸ್ವಗೃಹವೆಂತ ಗೈದನು.
ಉಂಟಿಲ್ಲಿ ಕ್ರಿಸ್ತವಾಸ.

Verse 3

ಕ್ರಿಸ್ತ್ಯೇಸು ನಿನ್ನ ಕೃಪೆಯು
ಈ ವರೆಗೆಮಗಿತ್ತು
ನಾವೆಣಿಸಿದ ಪುಣ್ಯವು
ಪೂರಾಗಿ ರದ್ದಾಗಿತ್ತು.
ಆದಾಮನ ದುರ್ಭಾವವು
ನಮ್ಮೆಲ್ಲ ಬಣ್ಣ ನುಂಗಿತು.
ನಾವಿಂದು ನಾಚುತೇವೆ.

Verse 4

ನವೀನ ಸಭಾವರ್ಷದಿ
ಪವಿತ್ರ ಆತ್ಮನಿಂದ
ನವೀನ ಭಾವ ನಿರ್ಮಿಸಿ
ಕೊಡಯ್ಯ ಕೃಪೆಯಿಂದ
ಮಾರ್ಪಡಿಸೆಮ್ಮ ಕರ್ತನೆ
ಆ ಮೇಲೆ ನಮ್ಮ ನಡತೆ
ನಿನ್ನನ್ನು ಮೆಚ್ಚಿಸೀತು.

Go to top