Verse 1

ಸ್ವಾಮಿ ದರ್ಶನಾರ್ಥವಾಗಿ
ಭಕ್ತ ಸಭೆ ಕೂಡಿದೆ
ಆತನೇ ಪ್ರಸನ್ನನಾಗಿ
ಇಲ್ಲಿರೋದು ಸತ್ಯವೆ
ಇಲ್ಲಿ ದೇವಗೃಹವು
ಇಲ್ಲಿ ಸ್ವರ್ಗದ್ವಾರವು.

Verse 2

ನಿನ್ನನ್ನೀಶ ಕಾಣ ಬಂದೆ
ನೀನು ಬಂದು ದರ್ಶಿಸು
ನಿಂಗೆ ಹೃದವನ್ನು ತಂದೆ
ಅದರಲ್ಲಿ ವಾಸಿಸು
ಎಲ್ಲಿ ನಿನ್ನ ಆಲಯ
ಅಲ್ಲಿ ಸ್ವರ್ಗ ಸಂತಸ.

Verse 3

ತನು ಮನ ಶುದ್ಧ ಮಾಡಿ
ನಿನಗೆ ಪ್ರತಿಷ್ಠಿಸು
ನಿನ್ನ ಐಕ್ಯದಿ ಕಾಪಾಡಿ
ಸತ್ಯಭಕ್ತಿ ವರ್ಧಿಸು
ಆಗಲೆನ್ನ ಪ್ರಾರ್ಥನೆ
ನಿನಗಿಷ್ಟ ಅರ್ಪಣೆ.

Verse 4

ವಾಕ್ಯವನ್ನು ಬಲದೊಡ
ಮನದೊಳ್ ಬೇರೂರಿಸು
ನೂರರಷ್ಟು ಫಲ ಕೊಡ
ಭೂಮಿ ಸಿದ್ಧ ಪಡಿಸು
ಅಂಧಕಾರ ಬಿಡಿಸು
ಜ್ಞಾನತೇಜ ಮೂಡಿಸು.

Verse 5

ಬೇಕು ನಿನ್ನ ಆಜ್ಞೆ ಕೇಳಿ
ಮಾಡೊ ಸಿದ್ಧ ಬುದ್ದಿಯು
ನೀನದಾಗಲೆಂದು ಹೇಳಿ
ನನ್ನಲ್ಲಯ್ಯಾ ನಿರ್ಮಿಸು
ಹೆಚ್ಚಿಸೆನ್ನ ನಂಬಿಕೆ
ಆಗ ಕಾದಿ ಜೈಸುವೆ.

Verse 6

ಭೂಸಂಜಾರದಲ್ಲಿ ಮನ್ನ
ಕೊಟ್ಟು ನನ್ನ ಪೋಷಿಸು
ಲೋಕಾರಣ್ಯದಿಂದೆನ್ನನ್ನು
ಸ್ವಾಮಿ ಪಾರುಗಾಣಿಸು
ಸ್ವರ್ಗ ಪ್ರಸ್ತದೂಟಕು
ದಯವಿಟ್ಟು ಸೇರಿಸು.

Go to top