Verse 1

ಈಶನೇ ಪ್ರತ್ಯಕ್ಷನಾಗು
ಆಶೀರ್ವಾದಪ್ರದನಾಗು
ನಾವುದ್ದಾರವಾಗುವಂತೆ
ಜೀವವುಳ್ಳ ಯಜ್ಞದಂತೆ
ಇರ್ವ ನೀನು ನಮ್ಮನ್ನೀಗ
ಸರ್ವ ವಿಷಯಾಶೆ ನೀಗ
ಮಾಡಿ ತಂದೆಗೈಕ್ಯವಾಗಿ
ಕೂಡಿಸಿಕ್ಕು ಕೃಪೆಯಾಗಿ.

Verse 2

ಪಾಪವೆಂಬ ಸಾಲ ಸಂತು
ತಾಪ ತೀರಲಿಕ್ಕೆ ಬಂತು
ಎಂತೆಮ್ಮಲ್ಲಿ ಹೇಳಿ ಬಿಡು
ಶಾಂತಿ ಹೃದದೊಳಗಿಡು
ಕಡೇ ದಿನ ಸಭೆಯಲ್ಲಿ
ಮೂಡುವ ಪ್ರಕಾಶದಲ್ಲಿ
ಸಂಚಕಾರಕ್ಕಾಗಿ ಈಡು
ಹಂಚಿ ಆತ್ಮಜ್ಯೋತಿ ನೀಡು.

Verse 3

ಮೋಕ್ಷ ದಿನ ಬರುವಲ್ಲಿ
ದೀಕ್ಷ ಸಭೇ ಪ್ರಭೆಯಲ್ಲಿ
ನಾವೂ ನಿಂತುಶುಭ್ರ ವಸ್ತ್ರ
ಜೀವಮಾಲೆ ಜಯಶಸ್ತ್ರ
ಪರ್ಣಧ್ವಜ ಪಡಕೊಂಡು
ಸ್ವರ್ಣನಾಮಧೇಯಗೊಂಡು
ಸತ್ಯಸ್ವಾಮಿ ಸೇವೆ ಗೈಯ
ನಿತ್ಯ ದಯಪಾಲಿಸಯ್ಯ.

Go to top