Verse 1

ದೇವರೆಮ್ಮ ಮಧ್ಯೆ
ಇರುತ್ತಿರಲಾಗಿ
ಪ್ರಾರ್ಥಿಸೋಣ ಭಕ್ತರಾಗಿ.
ಹೌದು ದೇವರಿಲ್ಲಿ
ಆತಗಡ್ಡ ಬಿದ್ದು
ಧ್ಯಾನಿಸೋಣ ಸುಮ್ಮನಿದ್ದು.
ಭಕ್ತರೇ
ಆತಗೇ
ಹೃದವನ್ನು ತರ್ರಿ
ಸೇವೆ ಮಾಡ ಬರ್ರಿ.

Verse 2

ನಿಂಗೆ ದೂತಸೈನ್ಯ
ಪರಲೋಕದಲ್ಲಿ
ನಿತ್ಯ ಹಗಲಿರುಳಲ್ಲಿ.
ಶುದ್ದ ಪರಿಶುದ್ಧ
ಕರ್ತಎಂತ ಹಾಡಿ
ಬೊಗ್ಗುತಾರೆ ಸ್ತೋತ್ರ ಮಾಡಿ.
ಇಲ್ಲಿಯು
ಲಾಲಿಸು
ನಮ್ಮ ದೀನ ಸ್ತೋತ್ರ
ಇಕ್ಕು ನಿನ್ನ ಶ್ರೋತ್ರ.

Verse 3

ಸಾಕು ನಿನ್ನ ದಯ
ನಮಗಿರೆ ಕರ್ತ
ಈ ಪ್ರಪಂಚದಾಶೆ ವ್ಯರ್ಥ.
ನಿನ್ನ ವಶರಾಗಿ
ಪರಿಪೂರ್ಣ ಸೇವೆ
ಮಾಡ ಸಿದ್ಧರಾಗಿದ್ದೇವೆ.
ದೇವರೇ
ನಿನಗೇ
ತಕ್ಕದೆಮ್ಮ ಧ್ಯಾನ
ತಕ್ಕದೆಲ್ಲ ಮಾನ.

Verse 4

ನಮ್ಮ ಹೃದದಲ್ಲಿ
ದಯದಿಂದ ಬಂದು
ಪರಿಶುದ್ಧ ಜಲ ತಂದು.
ತೊಳೆ ಪಾಪಮಲ
ಹೃದದಂಧಕಾರ
ಆಗಲಿನ್ನು ಪರಿಹಾರ.
ಕರ್ತನೇ
ನಿನ್ನಲ್ಲೇ
ನಮಗುಂಟು ಜ್ಞಾನ
ನಿತ್ಯ ಸಮಾಧಾನ.

Go to top