Verse 1

ಎಳೆ ನಿನ್ನ ಮೇಲೆಯೇ
ನಮ್ಮ ಚಿತ್ತ ಯೇಸು.
ನಿನ್ನ ವಾಕ್ಯಧ್ಯಾನವೇ
ಆಗಲಿಂದು ಲೇಸು.
ವಾಕ್ಯಜ್ಯೋತಿ ಹಿಡಿದು
ಪೂರ್ಣವಾಗಿ ವ್ಯಾಪಿಸು
ನಮ್ಮಾಂತರ್ಯ ಯೇಸು.

Verse 2

ನಮ್ಮ ಮಧ್ಯೆ ಬಂದಿರು
ನೀಗು ಪಾಪವನ್ನು.
ಹೃದವಂ ಮಾರ್ಪಡಿಸು
ಬೋಧಿಸು ನಮ್ಮನ್ನು.
ಲೋಕಬುದ್ಧಿ ತಪ್ಪುತೆ
ಲೋಕರೀತಿ ಕೆಟ್ಟದ್ದೆ
ಬೇರೆ ಮಾಡೆಮ್ಮನ್ನು.

Verse 3

ಯೇಸು ನಿನ್ನ ಹಾಗೆಯೇ
ರೂಪಿಸೆಮ್ಮ ಪ್ರಾಣ.
ನಿನ್ನ ಮಾರ್ಗದಲ್ಲಿಯೇ
ನಮಗೂ ಪ್ರಯಾಣ.
ನಿನ್ನ ಸೌಮ್ಯಭಾವವು
ಪ್ರೀತಿನೀತಿ ಶುದ್ದಿಯು
ನಮಗೂ ಪ್ರಮಾಣ.

Verse 4

ಯೇಸು ಪೂರಾ ನೊಂದಿಸು
ಕೆಟ್ಟ ಬೆಂಕಿಯನ್ನು.
ನಿತ್ಯ ನಮ್ಮೊಳಿರಿಸು
ನಿನ್ನ ಶಾಂತಿಯನ್ನು.
ಕೀಳು ಹೆಮ್ಮೇ ಬೇರನು
ದಿವ್ಯ ವೈದ್ಯ ನೀಗಿಸು
ಪಾಪರೋಗವನ್ನು.

Verse 5

ಮಕ್ಕಳಂತೆ ನಂಬಿಕೆ
ನಿನ್ನಲ್ಲಿಟ್ಟಿದ್ದೇವೆ.
ನಿನ್ನ ಹಿಂದೆ ನಿತ್ಯಕೆ
ಯೇಸು ಬರುತ್ತೇವೆ.
ಇಲ್ಲಿ ನಂಬಿದಂತೆಯೆ
ನಿನ್ನನ್ನಲ್ಲಿ ಕಾಣ್ಬರೆ
ಆಶೆಗೊಂಡಿದ್ದೇವೆ.

Go to top