Verse 1

ವಾಕ್ಯವನ್ನು ಬಲದಿಂದ
ಕರ್ತಾ ಸಾರಗೊಡಿಸು.
ಹೃದದಲ್ಲಿ ಆತ್ಮನಿಂದ
ವಾಕ್ಯಬಾಣ ನಾಟಿಸು.
ಕುದಿಯುವ ಮನಸ್ಸನ್ನೂ
ಜನಾಕರ್ಷ ವಾಕ್ಯವನ್ನೂ
ಕೊಟ್ಟು ಸಾರೊ ಆಳಿಗೆ
ಇರು ಅವನೊಂದಿಗೆ.

Verse 2

ಒಡೆಯಲಿ ಬಂಡೆಯನ್ನು
ವಾಕ್ಯವೆಂಬ ಸುತ್ತಿಗೆ.
ಉರಿಸಲಿ ಹೃದವನ್ನು
ವಾಕ್ಯಜ್ವಾಲೆ ಕರ್ತನೆ.
ಕಲ್ಲಿನಂಥ ಮನಸ್ಸನ್ನು
ಕರಗಿಸಿ ಗರ್ವವನ್ನು
ಮುರಿದು ಸುಧಾರಿಸು
ಕರಗಿದ ಮನಸು.

Verse 3

ಘೋರ ಪಾಪ ನಿದ್ರೆಯಲ್ಲಿ
ಬಿದ್ದ ಒಬ್ಬನಿದ್ದರೆ
ಕರ್ತನೇ ಈ ದಿನದಲ್ಲಿ
ಕರುಣಿಸು ಬೇಗನೇ.
ಎಚ್ಚರಿಸು ಅವನನ್ನು
ನರಕದ ಭಯವನ್ನು
ಕಣ್ಣ ಮುಂದೆ ತೋರಿಸು
ನಿದ್ರೆಯಿಂದ ಎಬ್ಬಿಸು.

Verse 4

ಇಂದು ನಿನ್ನ ಕೃಪೆಯನ್ನು
ಯಾವನಾಶಿಸುವನೋ
ಅವನಾತ್ಮಗೃಹವನ್ನು
ಸೇರಿ ವಸ್ತಿ ಮಾಡಿಕೋ.
ಜಜ್ಜಿ ಹೋದ ಮನಸನ್ನು
ನಲಗಿದ ಗಲಗನ್ನು
ನೀನು ಮುರಿದ್ಹಾಕದೆ
ಮಾಡು ಒಳ್ಳೆ ಆರೈಕೆ.

Verse 5

ಮತ್ತು ಶಿಷ್ಯರೆಲ್ಲರನ್ನು
ಆತ್ಮನಿಂದ ತುಂಬಿಸು.
ನಿನ್ನ ವಾಕ್ಯಶಕ್ತಿಯನ್ನು
ನಮ್ಮ ಮೇಲೆ ತೋರಿಸು.
ನೋಡುನಾವು ಬಂದಿದ್ದೇವೆ
ನಿನ್ನನೀಗ ಕಾಯುತೇವೆ
ನಮ್ಮನಾಶೀರ್ವದಿಸು
ಆತ್ಮ ದಯಪಾಲಿಸು.

Go to top