Verse 1

ನಮ್ಮನ್ನು ನೋಡು ಕರ್ತನೆ
ನಿನ್ನಾತ್ಮ ಕೊಡು ನಮಗೆ
ಸನ್ಮಾರ್ಗದಲ್ಲಿ ನಮ್ಮನ್ನು
ಕಟಾಕ್ಷದಿಂದ ನಡಿಸು.

Verse 2

ನಿನ್ನನ್ನು ಸ್ತುತಿಸೋದಕೆ
ನೀ ಸಡ್ಲಿಸೆಮ್ಮ ನಾಲಿಗೆ
ಸಂತೋಷವುಳ್ಳ ಸೇವೆಗೆ
ನಮ್ಮನ್ನು ಎಬ್ಬಿಸಾಳ್ಮನೆ.

Verse 3

ಸದ್ವಾಕ್ಯವೆಂಬ ಬೀಜವು
ನಮ್ಮೆದೆಯಲ್ಲಿ ಮೊಳಿತು
ನಿನ್ನಾತ್ಮನಿಂದ ವರ್ಧಿಸಿ
ಅಮೂಲ್ಯ ಪೈರು ಕೊಡಲಿ.

Verse 4

ಪಿತಾಪುತ್ರಾತ್ಮ ದೇವರೇ
ತ್ರಯ್ಯೆಕನೇ ಕೃಪಾಳುವೇ
ಕಟಾಕ್ಷಪೂರ್ಣ ನಿನ್ನನು
ಕೊಂಡಾಡುತೇವೆ ನಿತ್ಯಕು.

Go to top