Verse 1

ದೇವರೇ ಸುವಾರ್ತೆಯನ್ನು
ಕೇಳ ಕೂಡಿ ಬಂದೆವು.
ಒಳ್ಳೆ ಆಶೀರ್ವಾದವನ್ನು
ಕೊಡು ಪ್ರತಿ ಭಕ್ತಗು.
ಜೀವವುಳ್ಳ ರೊಟ್ಟಿಯನ್ನು
ಹಂಚಿ ಜೀವಜಲವನ್ನು
ಪಾನಕಾಗಿ ಎರೆದು
ಆತ್ಮ ತೃಪ್ತಿಪಡಿಸು.

Verse 2

ಆದಿಪಿತೃ ಪಾಪದಿಂದ
ಶಾಪಗ್ರಸ್ತರಾದೆವು
ಸ್ವಂತ ಪಾಪಸೇವೆಯಿಂದ
ಮೃತಿ ಪ್ರಾಪ್ತವಾಯಿತು.
ತಿಳುಕೊಂಬ ಮನಸ್ಸನ್ನು
ಲಾಲಿಸುವ ಕಿವಿಯನ್ನು
ನೋಡುವಂಥ ಕಣ್ಣನು
ಕ್ರಿಸ್ತ ದಯೆಪಾಲಿಸು.

Go to top