Verse 1

ನನ್ನೆದೆಗುಂಡಿಯಲ್ಲಿ
ನಿನ್ ನಾಮ ಮಾತ್ರವೆ
ಐ ಹಗಲಿರುಳಲ್ಲಿ
ತಳ್ತಳಿಸುತ್ತದೆ
ಕ್ರಿಸ್ತ್ಯೇಸು ನಿನ್ನ ರಕ್ತ
ನನ್ನಾತ್ಮತೃಪ್ತಿಯು
ನಾ ನಿತ್ಯ ನಿಂಗಾಸಕ್ತ
ಆಳಾಗಿರುವೆನು.

Verse 2

ಶ್ರೀ ನಾಮವೇ ಕ್ರಿಸ್ತ್ಯೇಸು
ನಾಮಾಧಿನಾಮವೇ
ನೀನಿರೆ ಎಲ್ಲ ಲೇಸು
ನಿನ್ ಹೊರ್ತು ಸುಖವೆ?
ನಿನ್ನನ್ನು ನಂಬೋ ತಾಪಿ
ಸುಕ್ಷೇಮಶಾಲಿಯು
ನಿನ್ನನ್ನು ಹೇಳ್ವ ಪಾಪಿ
ವಿಮುಕ್ತನಾಹನು.

Verse 3

ಬೇರೊಂದು ಹೆಸರಿಂದ
ಸಂರಕ್ಷೆಯಿಲ್ಲವು
ಬೇರೊಂದು ಬೀಜದಿಂದ
ಸಂಜೀವನಾಗದು.
ಈ ಜೀವ ಮಾತ್ರದಲ್ಲಿ
ಅನಂತ ಶಕ್ತಿಯು
ಈ ಹೆಸರೊಂದರಲ್ಲಿ
ಅನಂತ ಸೌಖ್ಯವು.

Verse 4

ಕುಶಾಪಗ್ರಸ್ತನಾದ
ನಾನೀಗ ಮುಕ್ತನೇ
ನರ್ಕಾಗ್ನಿಪಾತ್ರನಾದ
ನಾನೀಶಶಿಶುವೇ
ನನ್ನೆದೆ ಕತ್ತಲಲ್ಲಿ
ಈ ಯೇಸು ಹೆಸರು
ಅಪಾರ ತೇಜದಲ್ಲಿ
ತೋರೋದು ನಿತ್ಯಕು.

Go to top