Verse 1

ಎಷ್ಟಿಂಪು ಯೇಸುನಾಮವು
ವಿಶ್ವಾಸಿ ಕಿವಿಗೆ
ಅಭಯವೀಯುವಂಥಾದು
ಕಂಗಾಲ ಭಕ್ತಗೆ.

Verse 2

ದಿಕ್ಕಿಲ್ಲದಂಥ ಪಾಪಿಗೆ
ಆಶ್ರಯವಾಗುತೆ.
ಅರಣ್ಯ ಹಾಯುವಾತಗೆ
ಈ ನಾಮ ಮನ್ನವೆ.

Verse 3

ಈ ನಾಮ ಭದ್ರಶಿಲೆಯು
ಗುರಾಣಿ ಆಸರೆ
ಒಬ್ಬೊಬ್ಬ ಕ್ರೈಸ್ತ ದಾಸಗು
ಸಮಸ್ತ ಸಭೆಗೆ.

Verse 4

ಉದ್ಧಾರಿ ಮಿತ್ರ ಪಾಲಕ
ಪ್ರವಾದಿ ಅರಸೇ
ಸ್ವೀಕಾರ ಮಾಡೀ ಗೀತವ
ನನ್ನಲ್ಪ ಗೀತವೇ.

Verse 5

ಅಪಾರ ನಿನ್ನ ಪ್ರೀತಿಯ
ನಾನೆಡೆಬಿಡದೆ
ಕೊಂಡಾಡಿ ಶ್ವಾಸ ಹೋಗುವ
ಸಮಯ ಹಾಡುವೆ.

Go to top