Verse 1

ಕ್ರಿಸ್ತ್ಯೇಸುವಲ್ಲಿ ಕಾಣಬಂದ
ಅಪಾರ ಪ್ರೀತಿ ಅರಿತು
ಅರಿಷ್ಟಗ್ಹೊಸ ಜೀವ ತಂದ
ಕಟಾಕ್ಷಕಡ್ಡ ಬೀಳ್ವೆವು.
ನಾವಿನ್ನು ನಮ್ಮ ಮರೆಯೊಣ
ಪ್ರೇಮಾಬ್ಧಿಯಲ್ಲಿ ಮುಳುಗೋಣ.

Verse 2

ನಿನ್ನೊಲ್ಮೆ ಯೇಸು ರಕ್ಷಾ ತ್ರಾಣ
ನಿನ್ನಾಶೀರ್ವಾದ ಗತಿಯು.
ನೀನೆನ್ನ ಹೃದದಂತಃಪ್ರಾಣ
ನೀನೆನ್ನ ನಿಜ ಮೋಕ್ಷವು.
ನೀ ಪ್ರೀತಿ ಅಪ್ಪಿಕೊಳ್ಳು ನನ್ನ
ಆರೈಕೆ ಮಾಡು ಶಿಶುವನ್ನು.

Verse 3

ನೀ ಮಾತ್ರ ಬೇಕು ನೀನಗತ್ಯ
ನಾ ನಿನಗಾಗಿ ಬಾಳುವೆ
ಪ್ರಪಂಚ ಪೂರ್ಣವಾಗ್ಯಸತ್ಯ
ನನ್ನಾಶಾಬಂಧ ನಿನ್ನಲೆ.
ನಿನ್ನಲ್ಲಿ ಶಾಂತಿ ಹೃತ್ಸಂತೋಷ
ನಿನ್ನಲ್ಲಿ ಶ್ರೇಷ್ಠ ಆತ್ಮ ಪೋಷ.

Verse 4

ಶ್ರೀ ಯೇಸು ನಿನ್ನ ನಾಮವನ್ನು
ಕೊಂಡಾಡುತೇವೆ ಎಂದಿಗು
ಸಂಪ್ರೀತಿಮೂಲ ಪ್ರೀತಿಯನ್ನು
ನಮ್ಮೊಳು ನೀನು ಹುಟಿಸು.
ನೀ ತೋರಿಸಿಪ್ಪ ದಾರಿಯಲ್ಲಿ
ಸೇರೇವು ಜೀವರಾಜ್ಯದಲ್ಲಿ.

Go to top