Verse 1

ಸರ್ವ ಕಷ್ಟ ಪರಿಹಾರ
ಗೈಯುವಂಥ ಕ್ರಿಸ್ತನು
ಇದ್ದರೆನಗೆಂಥಾ ಭಾಗ್ಯ
ಆತ್ಮಕ್ಕೆಂಥಾ ಸೌಖ್ಯವು.
ಮರ್ತ್ಯರಾದ ಮಿತ್ರರೆಲ್ಲ
ನನ್ನ ಮರ್ತುಬಿಟ್ಟರು.
ದಿವ್ಯ ಮಿತ್ರನಾದ ಕ್ರಿಸ್ತ
ಎಂದೂ ಬಿಡದಾತನು.

Verse 2

ಆತ ಹತ್ರವಿರುವಲ್ಲಿ
ತಾಪತ್ರಯ ಬಂದರು
ದೃಷ್ಟಿಯಿಟ್ಟು ಆತನಲ್ಲಿ
ಶಾಂತಿ ಪಡಕೊಳ್ವೆನು
ಆತನೊಳ್ಳೇ ಮಿತ್ರನಾಗಿ
ತಾಪಿಯಾದ ನನಗೆ
ನಾನು ಸಹತಾಪಿಎಂದು
ಧೈರ್ಯವನ್ನು ಹೇಳನೆ?

Verse 3

ಹೊತ್ತುಕೊಳ್ಳಲಾರದಂಥ
ಭಾರ ನನಗಿರಲು
ಆಪ್ತಮಿತ್ರ ನೆರವಾಗು
ನೀನೆ ನಂಗೆ ಶರಣು
ನಾನು ಬಲಹೀನನೆಂದು
ನೀನು ತಿಳಿದಾತನು.
ನನ್ನ ಕೃಪೆ ನಿಂಗೆ ಸಾಕು
ಎಂದು ಬಲ ಪಡಿಸು.

Go to top