Verse 1

ನನ್ನೊಳ್ಳೆ ಮಿತ್ರ ದಿವದಲ್ಲಿ
ಭೂಮಿಲಿ ಮಿತ್ರರಿಲ್ಲವು
ಅಸತ್ಯ ಲೋಕಭ್ರಮೆಯಲ್ಲಿ
ಕುಯುಕ್ತಿ ಬಲವಾದುದು.
ನನ್ನೊಳಗಿದೇ ಮನಸ್ಸು
ಕ್ರಿಸ್ತ್ಯೇಸು ಒಳ್ಳೇ ಮಿತ್ರನು.

Verse 2

ಮನುಷ್ಯರಲ್ಲಿ ಸ್ಥಿರವಿಲ್ಲ
ನನ್ನಾಪ್ತ ದೃಢ ಶಿಲೆಯು
ನಾ ಸೋಲುವಾಗ ಬಿಡೋದಿಲ್ಲ
ನಾ ಬೇಡೆ ಕೊಡದಿರನು.
ತಾಯ್ತಂದೆ ಮರ್ತು ಬಿಡೋರು
ಕ್ರಿಸ್ತ್ಯೇಸು ಒಳ್ಳೇ ಮಿತ್ರನು.

Verse 3

ನಿನ್ನಾಪ್ತರೆಂಗೆ ಬೇಡ ಲೋಕ
ಆ ಕಳ್ಳರನ್ನು ನಂಬೆನು.
ನೀ ದ್ವೇಷ ಮಾಡಲೇನೂ ಶೋಕ
ನನ್ನೆದೆಯಲ್ಲಿ ಹುಟ್ಟದು.
ನನ್ನಾಪ್ತನೊಲ್ಮೆ ಕುಂದದು
ಕ್ರಿಸ್ತ್ಯೇಸು ಒಳ್ಳೇ ಮಿತ್ರನು.

Go to top