Verse 1

ಯೇಸುವಿನ ಕುರಿಯು
ನಾನು ಚಿಂತೆ ಪಡೆನು.
ನಂಗೆ ನಿತ್ಯಕ್ಕೂ ಸಂತೋಷ
ಪ್ರೀತಿಯಿಂದ ಒಳ್ಳೆ ಪೋಷ
ಕೊಟ್ಟು ಕಾಯ್ವ ಯೇಸುವು
ನನ್ನ ನಾಮ ಬಲ್ಲನು.

Verse 2

ಕೋಲು ಹಿಡಿದೆನ್ನನ್ನು
ಶಾಂತಿಯಿಂದ ಕಾಯಲು
ಸುಖಕ್ಷೇಮದಲ್ಲಿದ್ದೇನೆ
ಒಳ್ಳೇ ಮೇವು ಮೆಲ್ಲುತೇನೆ
ದಾಹವಾಗೆ ಕುರುಬ
ತೋರಿಸೋನು ಬುಗ್ಗೆಯ.

Verse 3

ಸುಖಿಯಾದ ಕುರಿಗೆ
ಹೃತ್ಸಂತೋಷವಿರದೆ?
ಈ ಸುಕಾಲದಂತ್ಯದಲ್ಲಿ
ಆತ ಸ್ವಂತ ಹೆಗಲಲ್ಲಿ
ಮನೆಗೆನ್ನನ್ನೊಯ್ಯಲು
ಸುಖಪೂರ್ತಿ ಅಹುದು.

Go to top