Verse 1

ಒಂದು ನೂರು ಕುರಿಯು
ಹಟ್ಟಿಯೊಳಗಿದ್ದವು.
ಕಾಯುವವ ಪ್ರೀತಿಯಿಂದ
ಕುರಿ ನಡಿಸಿದ್ದರಿಂದ
ಸುಖಕ್ಷೇಮ ಪಡೆದು
ಚಿಂತೆಯಿಲ್ಲದಿದ್ದವು.

Verse 2

ಒಂದು ಕುರಿ ಮಾತ್ರವೇ
ಏನೂ ಸುಖ ಕಾಣದೆ
ತನಗೆ ಸ್ವತಂತ್ರವನ್ನು
ಬಯ್ಸಿಕೊಂಡು ಹಟ್ಟಿಯನ್ನು
ಬಿಟ್ಟು ಹಟ ಹಿಡಿದು
ದೂರ ಓಡಿಹೋಯಿತು.

Verse 3

ಅಪ್ಪಾ ತೊಂಭತ್ತೊಂಭತ್ತು
ಹಟ್ಟಿಯೊಳಗಿರಲು
ಒಂದು ಹೋದರೇನು ನಷ್ಟ?
ತರಲಿಕ್ಕೂ ಎಷ್ಟೋ ಕಷ್ಟ
ಎಂತ ಜನರೆಲ್ಲರು
ಬುದ್ಧಿ ಹೇಳ ಹೋದರು.

Verse 4

ಆದರೊಳ್ಳೇ ಕುರುಬ
ಅಂಥ ಮಾತು ಲಾಲಿಸ.
ಕುರಿ ಹಿಂದೆ ಹೋಗಿ ತಾನೆ
ಕುರಿ ಹೆಜ್ಜೆ ಹಿಡ್ಯುತಾನೆ
ಓಡಿ ಬೇಸರಾಗದೆ
ಕುರಿ ಎಲ್ಲಿ ಬಿದ್ದದೆ?”

Verse 5

ಹಟ್ಟಿ ಬಿಟ್ಟ ಕೂಡಲೆ
ಕಷ್ಟ ಬಂತು ಕುರಿಗೆ.
ಗುಡ್ಡ ಏರಿ ಕೊರ್ಕಳಲ್ಲಿ
ಬಿದ್ದುಕೊಂಡು ಮುಳ್ಳಿನಲ್ಲಿ
ಗಾಯವಾಗಿ ಸಾಯಲು
ಕುರುಬಂಗೆ ಸಿಕ್ಕಿತು.

Verse 6

ಬುದ್ಧಿಗೆಟ್ಟ ಕುರಿಯ
ಎತ್ತಿಕೊಂಡು ಕುರುಬ
ಎಂಥ ಗಾಢಕತ್ತಲನ್ನೂ
ಗುಡ್ಡ ತಗ್ಗು ಹಳ್ಳವನ್ನೂ
ದಾಟಿ ಬಂದನೆಂಬದು
ಯಾರಿಗೂ ಗೊತ್ತಿಲ್ಲವು.

Verse 7

ಯಾಕೆ ಗುಡ್ಡ ದಾರಿಯು
ತುಂಬ ರಕ್ತಹನಿಯು”?
ತಪ್ಪಿ ಹೋದ ಕುರಿಗಾಗಿ
ನಾನು ಓಡುತಿರಲಾಗಿ
ಬಂಡೆಗಲ್ಲು ತಾಗಲು
ನನ್ನ ರಕ್ತ ಸೋರಿತು”.

Verse 8

ಯಾಕೆ ನಿನ್ನ ಕೈಗಳು
ಇಷ್ಟು ಗಾಯವಾದವು?”
ಕುರಿ ಸಿಕ್ಕುವಷ್ಟರಲ್ಲಿ
ರಾತ್ರಿಯಾಗಿ ಕಾಡಿನಲ್ಲಿ
ತಿರುಗಾಡುತಿರಲು
ಮುಳ್ಳು ನಂಗೆ ಚುಚ್ಚಿತು.

Verse 9

ಆಗ ಭೂಮಿ ಮೇಲೆಯೂ
ಪರಲೋಕದಲ್ಲಿಯೂ
ದೂತಸೈನ್ಯ ಹರ್ಷವಾಗಿ
ಕುರುಬನ ಸ್ತೋತ್ರಕ್ಕಾಗಿ
ತನ್ನ ಕುರಿ ತಂದನು
ಎಂಬ ಗೀತ ಹಾಡಿತು.

Go to top