Verse 1

ಶಾಂತ ಯೇಸುವೇ
ನಿನ್ನ ಹಾಗೆಯೇ
ಯಾರು ಸರ್ವ ಲೋಕದಲ್ಲಿ
ಎಲ್ಲ ನರಪುತ್ರರಲ್ಲಿ
ಅತಿಶ್ರೇಷ್ಠನೇ
ಶಾಂತ ಯೇಸುವೆ.

Verse 2

ನನ್ನ ಸಾಲವು
ಪೀಡೆ ಕೊಡಲು
ನೀನು ದೊಡ್ಡ ಪ್ರೀತಿಯಿಂದ
ನನ್ನನ್ನೆಲ್ಲ ದೋಷದಿಂದ
ಶುದ್ಧ ಮಾಡಿದಿ
ಸಾಲ ಸಲ್ಲಿಸಿ.

Verse 3

ಆದಿ ತೇಜನೇ
ಪ್ರೀತಿಯಿಂದಲೇ
ನರರಲ್ಲಿ ನರನಾಗಿ
ನೀಚ ಶತ್ರುಜನಕಾಗಿ
ನಿನ್ನನರ್ಪಿಸಿ
ಯಜ್ಞ ಮಾಡಿದಿ.

Verse 4

ದಿವ್ಯ ಶೂರನೆ
ಮೃತಿಯೊಳಗೆ
ಸೇರಿದುಷ್ಟ ಶತ್ರುವನ್ನು
ಜೈಸಿ ನಮ್ಮ ಶಿಕ್ಷೆಯನ್ನು
ಅನುಭವಿಸಿ
ಮೇಲಕ್ಕೇರಿದಿ.

Verse 5

ಸತ್ಪ್ರವಾದಿಯೇ
ಸರ್ವರಾಜನೇ
ನಿನ್ನ ಚಿತ್ತಕೊಪ್ಪುತ್ತೇನೆ
ನಿನ್ನ ಶಿಷ್ಯವಾಗಿದ್ದೇನೆ
ನಿನ್ನ ಪಾದವೆ
ಗತಿ ನನಗೆ.

Go to top