Verse 1

ನೀ ಮಾರ್ಗ ಕರ್ತ ನಿನ್ನನ್ನೆ
ಆಶ್ರಯಿಸಿದೆವು
ನಿನ್ ಹೊರ್ತು ತಂದೆ ಬಳಿಗೆ
ಯಾರೊಬ್ಬ ಬಾರನು.

Verse 2

ನೀ ಸತ್ಯ ನಿನ್ನ ವಾಕ್ಯವು
ಜ್ಞಾನೋಪದೇಶವು
ಸುಬುದ್ದೀ ಶುದ್ಧ ಮನಸ್ಸು
ನಿನ್ನಿಂದ ಬಪ್ಪುದು.

Verse 3

ನೀ ಜೀವಗೋರಿ ಒಡೆದು
ಸಾವನ್ನು ಜೈಸಿದಿ
ನಿನ್ನನ್ನು ನಂಬಿದವನು
ಇನ್ನ್ಯಾತಕಂಜಲಿ.

Verse 4

ನೀ ಮಾರ್ಗ ಸತ್ಯ ಜೀವವು
ಸನ್ಮಾರ್ಗ ತೋರಿಸಿ
ಸುಶಿಕ್ಷೆ ಕೊಟ್ಟುಸೇರಿಸು
ನಮ್ಮನ್ನು ಜೀವದಿ.

Go to top