Verse 1

ಸೂರ್ಯನೇರಿ ಮೇಘದಲ್ಲಿ
ಜ್ಯೋತಿ ಚೆಲ್ಲುವಂದದಲ್ಲಿ
ನರರಂಧಕಾರವ
ಯೇಸು ಹೋಗ ಮಾಡುವ.

Verse 2

ಹೊನ್ನು ಮುಡಿ ಮಂಡೆಗಿಲ್ಲ
ಅಹಂಕಾರ ಛಾಯೆಯಿಲ್ಲ
ಕರುಣಾಶಯವೆ
ಆತನಲ್ಲಿ ಮಿಂಚುತ್ತೆ.

Verse 3

ಹಾನೋಕನ ಭಾವಶುದ್ಧಿ
ಇಸಾಕ್ ತಾಳ್ದ ಯಾಗಬುಧ್ಧಿ
ಪಿತೃಗಳ ಧರ್ಮವು
ಆತನ್ನಲ್ಲಿ ದೃಶ್ಯವು.

Verse 4

ಕಾಲಜ್ಞಾನಿ ಕೂಟವೆಲ್ಲ
ದೃಷ್ಟಿಯಿಟ್ಟು ಮೆಲ್ಲಮೆಲ್ಲ
ರಕ್ಷಕನ್ನ ಕಾಣಲು
ಪಾದಕ್ಕಡ್ಡ ಬಿದ್ದರು.

Verse 5

ಯಾವ ಮುನೀ ಬಾಯಿಯಿಂದ
ನಾವು ಕೇಳೋ ಮಾತಿಗಿಂತ
ಯೇಸುವಿನ ವಾಕ್ಯವು
ಎಷ್ಟೋ ಶ್ರೇಷ್ಠವಾದದ್ದು.

Verse 6

ಕವಿ ಋಷಿ ರಾಜ ಶೂರ
ಇವರಲ್ಲಿ ಪಾಪ ದೂರ
ಮಾಡಿದವರಾರೆಲೋ?
ಕ್ರಿಸ್ತನೊಬ್ಬನಲ್ಲವೋ.

Verse 7

ಮರ್ತ್ಯರೇ ನಿಮ್ಮಲ್ಲಿ ಬಂದ
ಪ್ರೀತಿ ನೀತಿ ಜೀವ ತಂದ
ಆತನ ಕಟಾಕ್ಷವೆ
ಗೊತ್ತಿಲ್ಲೇನು ನಿಮಗೆ?

Verse 8

ದೈವಮಾನವಕುಮಾರ
ನಿನ್ನ ಮೂಲ್ಯ ಉಪಕಾರ
ನನ್ನ ಗತಿ ನನ್ನನ್ನು
ಹಿಡಿತ್ರಾಹಿ ನಿತ್ಯಕು.

Verse 9

ಕ್ರೂಜೆಯಲ್ಲಿ ತೂಗಿದಾತ
ಮೇಘದಲ್ಲಿ ಬರುವಾತ
ಶುದ್ಧ ಶುದ್ಧ ಶುದ್ಧನು
ಅನ್ನಲೆಲ್ಲ ಸೃಷ್ಟಿಯು.

Go to top