Verse 1

ಪ್ರೀತಿ ದಿವ್ಯ ರೂಪವಾಗಿ
ನನ್ನ ನೀನು ನಿರ್ಮಿಸಿ
ಪ್ರೀತಿ ಪೂರ್ಣ ಕೃಪೆಯಾಗಿ
ಬಿದ್ದ ನನ್ನನೆತ್ತಿದಿ.
ಪ್ರೀತಿ ಸರ್ವಕಾಲಕೆ
ದಾಸನಾದೆ ನಿನಗೆ.

Verse 2

ನೀನು ನನ್ನನ್ನಾದಿಯಿಂದ
ಆದುಕೊಂಡಿ ಪ್ರೀತಿಯೆ
ಪ್ರೀತಿ ಬಂದು ದಿವದಿಂದ
ನನ್ನ ಹಾಗೆ ಹುಟ್ಟಿದೆ.
ಪ್ರೀತಿ ಸರ್ವಕಾಲಕೆ
ದಾಸನದೆ ನಿನಗೆ.

Verse 3

ಪ್ರೀತಿ ನೀನು ಕ್ರೂಜೆಯಲ್ಲಿ
ಸತ್ತಿ ನನಗಾಗಿಯೆ
ಪ್ರೀತಿ ನೀನು ಯುದ್ಧದಲ್ಲಿ
ನನಗಾಗಿ ಕಾದಿದೆ.
ಪ್ರೀತಿ ಸರ್ವಕಾಲಕೆ
ದಾಸನಾದೆ ನಿನಗೆ.

Verse 4

ಪ್ರೀತಿ ನೀನೆ ಸತ್ವ ತ್ರಾಣ
ಆತ್ಮ ಜೀವ ಬೆಳಕು
ಪ್ರೀತಿ ನಂಗೆ ನಿನ್ನ ಪ್ರಾಣ
ಪಾಪಬಲಿಯಾಯಿತು.
ಪ್ರೀತಿ ಸರ್ವಕಾಲಕೆ
ದಾಸನಾದೆ ನಿನಗೆ.

Verse 5

ಪ್ರೀತಿ ನಿನ್ನ ನೊಗವನ್ನು
ಎಂದೂ ಹೊತ್ತುಕೊಂಬೆನು
ಪ್ರೀತಿ ನನ್ನ ಎದೆಯನ್ನು
ಪ್ರೇಮಭ್ರಾಂತಿ ಬಿಡದು.
ಪ್ರೀತಿ ಸರ್ವಕಾಲಕೆ
ದಾಸನಾದೆ ನಿನಗೆ.

Verse 6

ಪ್ರೀತಿ ನನ್ನ ಪ್ರಾಣಕಾಗಿ
ಎಷ್ಟೋ ಶ್ರಮ ತಾಳಿದಿ
ಪ್ರೀತಿ ಮಧ್ಯವರ್ತಿಯಾಗಿ
ನನಗಾಗಿ ಬೇಡುತಿ.
ಪ್ರೀತಿ ಸರ್ವಕಾಲಕೆ
ದಾಸನಾದೆ ನಿನಗೆ.

Verse 7

ಪ್ರೀತಿ ನಂಗೆ ಗೋರಿ ಬಿಟ್ಟು
ಏಳ ನೀನು ಹೇಳಲೆ
ಜೀವಮಾಲೆಯೆನಗಿಟ್ಟು
ಕೊಟ್ಟ ನಿನಗೆರ್ಗುವೆ.
ಪ್ರೀತಿ ಸರ್ವಕಾಲಕೆ
ದಾಸನಾದೆ ನಿನಗೆ.

Go to top