Verse 1

ನನ್ನ ಯೇಸುವಗಲೆ
ಆತ ಸತ್ತ ನನಗಾಗಿ.
ಎಡೆ ಬಿಡದಾತಗೆ
ಅಂಟುತೇನೆ ಸ್ಥಿರವಾಗಿ.
ಆತ ಜೀವಜ್ಯೋತಿಯೆ
ನನ್ನ ಯೇಸುವಗಲೆ.

Verse 2

ನನ್ನ ಯೇಸುವಗಲೆ
ನನ್ನ ಆಸ್ತಿ ನನ್ನ ಪ್ರಾಣ
ವಶಕೊಟ್ಟೆನಾತಗೆ
ಆತ ನನ್ನ ಸಮಾಧಾನ.
ನಾನು ಇರ್ವ ವರೆಗೆ
ನನ್ನ ಯೇಸುವಗಲೆ.

Verse 3

ಇಂದ್ರಿಯಂಗಳೊಳಗೆ
ತ್ರಾಣಧಾತು ಇಲ್ಲವಾಗಿ
ನನ್ನ ಅಂತ್ಯಕಾಲಕೆ
ಕಣ್ಣು ಮೊಬ್ಬು ಬರಲಾಗಿ
ಜೀವ ಪೋಪ ವೇಳೆಗೆ
ನನ್ನ ಯೇಸುವಗಲೆ.

Verse 4

ಸದ್ವಿಶ್ವಾಸ ಘನದಿ
ಶೋಭಿಸುವ ಸ್ಥಳ ಸೇರಿ
ತಂದೆ ಬಲಪಾರ್ಶ್ವದಿ
ಯೇಸು ಕೂತ ಪೀಠಕೇರಿ
ಆತನಲ್ಲಿ ಹರ್ಷಿಪೆ
ನನ್ನ ಯೇಸುವಗಲೆ.

Verse 5

ಮಾಯ ಡಂಭ ಮಹಿಮೆ
ನನಗೇನು ಹಿತವಲ್ಲ
ಸತ್ತು ಎದ್ದ ಯೇಸುವೆ
ಪೂರ್ಣ ತೃಪ್ತಿ ಮಾಡಬಲ್ಲ.
ನನ್ನ ಮಿತ್ರನಾತನೆ
ನನ್ನ ಯೇಸುವಗಲೆ.

Verse 6

ನನ್ನ ಯೇಸುವಗಲೆ
ಇರ್ವೆನಾತನೈಕ್ಯದಲ್ಲಿ
ಆತನಿಂದ ಕುಡಿವೆ
ಜೀವಜಲದ್ಹೊಳೆಯಲ್ಲಿ.
ಒಪ್ಪಿಕೊಳ್ಳಿ ಭ್ರಾತ್ರರೆ
ನನ್ನ ಯೇಸುವಗಲೆ.

Go to top