Verse 1

ನನ್ನ ಯೇಸು ಕ್ರಿಸ್ತನೆ
ನಿನ್ನ ಸ್ತೋತ್ರ ಹಾಡುವೆ.
ನಿನ್ನ ದಯೆ ನನಗೆ
ಅತಿಹಿತವಾಗಿದೆ.

Verse 2

ನಿನ್ನ ಚಿತ್ತದಿಂದಲೆ
ಇಹದಲ್ಲಿ ಹುಟ್ಟಿದೆ
ನಿನ್ನ ಕೃಪೆಯಿಂದಲೆ
ಪರಮೋಕ್ಷ ಸೇರುವೆ.

Verse 3

ಶಾಪವಂಶಕ್ಕೋಸ್ಕರ
ನೀನು ತಾಳ್ದಿ ಶಾಪವ
ನಿನ್ನ ಪ್ರಾಣಯಜ್ಞವೆ
ನಮ್ಮ ಪ್ರಾಣರಕ್ಷಣೆ.

Verse 4

ಗೋರಿ ಕತ್ತಲೊಳಗೆ
ಕರ್ತ ನೀನು ಸೇರಲೆ
ಮರಣಾಂಧಕಾರವು
ಪರಿಹಾರವಾಯಿತು.

Verse 5

ಯೇಸು ನಿನ್ನ ದೇಹವು
ಆತ್ಮಾಹಾರವಾದದು
ನಿನ್ನ ರಕ್ತ ಕ್ರಿಸ್ತನೆ
ಜೀವಪಾನ ನಮಗೆ.

Verse 6

ನೀತಿ ನಿನ್ನ ಕೃತ್ಯವು
ನಿನ್ನ ಗುಣ ಪ್ರೀತಿಯು
ತ್ರಾಣ ನಿನ್ನ ಆಜ್ಞೆಯು
ನಿನ್ನ ವಾಕ್ಯ ಪ್ರಾಣವು.

Verse 7

ಯೇಸು ನನಗೊಲೆದು
ನನ್ನ ಪಾಪ ಹರಿಸು
ನನ್ನ ಹೃದದೊಳಗೆ
ಮೂಡಿ ಆಳು ಸೂರ್ಯನೆ.

Verse 8

ಆಗ ನಿನ್ನ ಪ್ರೀತಿಯು
ನನ್ನ ಕ್ಷೇಮವಹುದು
ನಿನ್ನ ದಿವ್ಯ ಜ್ಞಾನವು
ಅಹುದಾತ್ಮ ಜ್ಯೋತಿಯು.

Verse 9

ನನ್ನ ಯೇಸು ಕ್ರೀಸ್ತನೆ
ನಿನ್ನ ಸ್ತೋತ್ರ ಹಾಡುವೆ
ನಿನ್ನ ದಯ ನನಗೆ
ಅತಿಹಿತವಾಗಿದೆ.

Go to top