Verse 1

ಯೇಸು ಕ್ರಿಸ್ತ ನಿನಗೆ
ನಿತ್ಯ ಘನ ಕೊಡುತ್ತೇವೆ
ನಿನ್ನ ಕೃಪೆಯಿಂದಲೆ
ನಿನ್ನ ಪ್ರಜೆಯಾಗಿದ್ದೇವೆ.
ನೀನು ಇಹಪರಕೆ
ನಮ್ಮ ಗತಿ ಯೇಸುವೆ.

Verse 2

ನಮ್ಮ ಕಷ್ಟ ತಿಳಿದು
ದೇವಸನ್ನಿಧಾನ ಬಿಟ್ಟಿ
ನಮ್ಮ ದ್ವೇಷವರಿತು
ನಮ್ಮ ಮೇಲೆ ಪ್ರೀತಿ ಇಟ್ಟಿ
ಆದಿತೇಜ ತ್ಯಜಿಸಿ
ನರನಾಗಿ ಹುಟ್ಟಿದಿ.

Verse 3

ನಮ್ಮ ಪಾಪರಾಶಿಗೆ
ಪ್ರಾಯಶ್ಚಿತ್ತ ಮಾಡ ಬಂದಿ
ಮೃತ್ಯುವಶ ಜನಕೆ
ಹೊಸ ಜೀವವನ್ನು ತಂದಿ
ನಮ್ಮ ಶಾಪ ವಹಿಸಿ
ನಿನ್ನ ರಕ್ತ ಚೆಲ್ಲಿದಿ.

Verse 4

ನೀನು ಸತ್ತು ಜೈಸಿದಿ
ಕ್ರೂರ ಮೃತಿರಾಜನನ್ನು
ನಿನ್ನ ಜೀವವರ್ಪಿಸಿ
ಕೊಂಡುಕೊಂಡಿ ಕ್ಷೇಮವನ್ನು
ಪಾಪಬದ್ಧ ವಂಶಕೆ.
ನಿನ್ನ ಪ್ರೀತಿ ದೊಡ್ಡದೆ.

Verse 5

ಹೊಸಿಯನ್ನ ಯೇಸುವೆ
ಸೋತ ಹಾಗೆ ಕಂಡು ಗೆದ್ದಿ
ಭೂಮಿಗರ್ಭದೊಳಗೆ
ಸೇರಿ ತೇಜದಿಂದ ಎದ್ದಿ.
ಈಗ ಶ್ರೇಷ್ಠ ಪೀಠದಿ
ಕೂತು ರಾಜ್ಯವಾಳುತಿ.

Verse 6

ಕ್ರಿಸ್ತ ನೀನು ಮರಳಿ
ಚೀಯೋನಲ್ಲಿ ಸೇರುವಾಗ
ನಿತ್ಯ ರಾಜ್ಯ ಸ್ಥಾಪಿಸಿ
ತೇಜಪೀಠವೇರಲಾಗ
ನಿನಗೆಲ್ಲ ಲೋಕವು
ನಮ್ಮಸ್ಕಾರ ಮಾಡೋದು.

Verse 7

ಈಗ ನಾವು ನಿನಗೆ
ನಂಬಿ ಘನ ಕೊಡುತ್ತೇವೆ
ನಿನ್ನ ಕೃಪೆಯಿಂದಲೆ
ನಿನ್ನ ಪ್ರಜೆಯಾಗಿದ್ದೇವೆ
ನೀನು ಇಹಪರಕೆ
ನಮ್ಮ ಗತಿ ಯೇಸುವೆ.

Go to top