Verse 1

ಆ ಕುರಿಮರೀ ವಧುವ
ನೋಡಿದರಂಥ ಸೋಜಿಗ.
ಕುರೂಪೆಯೂ ಸುರೂಪೆಯೂ
ಕುಜಾತೆಯೂ ಸುಜಾತೆಯೂ
ದೌರ್ಭಾಗ್ಯಳೂ ಸೌಭಾಗ್ಯವಂತಳೂ
ಇಂಥಾಕೆ ಎಲ್ಲೂ ಕಾಣಳೆಂದಿಗೂ.

Verse 2

ತಾನಾಗಿ ಆಕೆ ಹೀನಳೂ
ಆದಾಗ್ಯೂ ಮದುಮಗನು
ಸಂಪಾದಿಸಿತ್ತ ಉಡುಪು
ಉಟ್ಟಾಕೆ ಹ್ಯಾಗೆ ಕಾಣ್ಬಳು?
ಅಃಚಂದ್ರಕಾಂತಿಗಿಂತ ರಮ್ಯೆಯು
ಎಷ್ಟೆಷ್ಟು ಹೇಳಿದಾಗ್ಯೂ ತೀರದು.

Verse 3

ನಿತ್ರಾಣಿ ಮೂಢೆ ಲೋಕಕೆ
ಸಶಕ್ತ ಜಾಣೆ ಕರ್ತಗೆ.
ಈ ಲೋಕದಿಂದ ಹಿಂಸೆಯ
ಸರ್ವೇಶನಿಂದ ಒಲ್ಮೆಯ
ಹೊಂದಿರುವಂಥ ಕನ್ಯೆ ಯಾರೆಲೇ?
ಜಗತ್ತು ವ್ಯಾಪಿಸುವ ಸಭೆಯೇ.

Verse 4

ಸ್ವಭಾವದಿಂದ ನೀಚೆಯು
ಹಾ ಆಗಿದ್ದಾಳೆ ಊಚೆಯು.
ಈ ಮರ್ಮ ಯಾರು ಬಲ್ಲರು?
ಪವಿತ್ರ ರಕ್ತದ್ವಿಜರು
ವಿಶ್ವಾಸದಿಂದ ಗ್ರಹಿಸುವರು
ಸ್ವನೀತಿಮೆಚ್ಚೋಜನವರ್ಯದು.

Verse 5

ನಿಸ್ಸತ್ವ ಕೀಟದಂತೆಯೇ
ನೀನಿದ್ದರೇನು ಸಭೆಯೇ?
ಆಕಾಶಕೇರಿ ಹರ್ಷದಿ
ಸದಾ ಸಂಗೀತ ಹಾಡುವಿ.
ಇಕ್ಕಟ್ಟು ಬಾಗಲನ್ನು ದಾಟಿದಿ
ಕ್ರಿಸ್ತ್ಯೇಸು ಸ್ವಾಮಿಯೊಂದಿಗುಣ್ಣುವಿ.

Verse 6

ಕ್ರಿಸ್ತ್ಯೇಸುವಿನ ವಧುವು
ಯೆಹೋವನ ಮಹತ್ವವು
ವಿಶುದ್ಧ ಸ್ವಾಮಿ ಮುಖವ
ವಿಶುದ್ಧೆಯಾಗಿ ನೋಡುವ
ಆ ಕುರಿಮರೀ ಮದುಮಗಳು
ಸದಾ ಸಂತುಷ್ಟಳಾಗಿರುವಳು.

Go to top