Verse 1

ವಿಜೈಸುವಾತ ಪರದೈಸಿನಲ್ಲಿ
ಪ್ರವೇಶ ಮಾಡಿ ಅಡ್ಡಿಯಿಲ್ಲದೆ
ಆ ಜೀವವೃಕ್ಷಫಲ ತಿನ್ನುವಲ್ಲಿ
ಸದಾ ಸಂತೃಪ್ತನಾಹನಲ್ಲವೆ?
ನಾ ಬಲೆ ನಿತ್ಯ ನಿನ್ನೆಲ್ಲ ಕೃತ್ಯ
ಕೇಳಿದು ಸತ್ಯ ಶ್ರೀಸಭೆಯೇ.
ಕೇಳಿದು ಸತ್ಯ ಶ್ರೀಸಭೆಯೇ.

Verse 2

ವಿಜೈಸುವಾತ ಮೃತಿದ್ವಯದಿಂದ
ಏನೇನು ನಷ್ಟ ಪಡಲಾರನು
ನೀ ನಂಬಿಗಸ್ತನಾಗಿ ನಿಷ್ಠೆಯಿಂದ
ತಾಳೆಲ್ಲ ಹಿಂಸೆ ಸಾಯೊಮಟ್ಟಿಗು.
ಸಂಜೀವವನ್ನು ಕಿರೀಟವನ್ನು
ಇವೆಲ್ಲವನ್ನು ನಿಂಗೀವೆನು.
ಇವೆಲ್ಲವನ್ನು ನಿಂಗೀವೆನು.

Verse 3

ವಿಜೈಸುವಾತಗುಣ್ಣ ಕೊಡುತ್ತೇನೆ
ಬಚ್ಚಿಟ್ಟ ದಿವ್ಯ ಮನ್ನದಿಂದಲೆ
ನವೀನ ನಾಮವಾತಗಿಕ್ಕುತ್ತೇನೆ
ವಿಶುದ್ಧ ರತ್ನದೊಳು ಕೆತ್ತಿದೆ.
ಈ ಮನ್ನವನ್ನು ಈ ನಾಮವನ್ನು
ಸೋತವರಿನ್ನು ಹೊಂದುವರೇ?
ಸೋತವರಿನ್ನು ಹೊಂದುವರೇ?

Verse 4

ವಿಜೈಸುವಾತಗಾಧಿಪತ್ಯವನ್ನು
ಜನಾಂಗಗಳ ಮೇಲೆಯಿವೆನು
ಹಾ ಲೋಹದಂಡದಿಂದಲವರನ್ನು
ತನ್ನಿಚ್ಛೆಯಂತೆ ನಡಿಸುವನು
ಒಕ್ಕೊಟ ಹಂಟೆ ಮಣ್ಣಾಗುವಂತೆ
ದುರ್ವೈರೀ ತಂಟೆ ಅಳಿಸೋನು.
ದುರ್ವೈರೀ ತಂಟೆ ಅಳಿಸೋನು.

Verse 5

ವಿಜೈಸುವಾತ ಶ್ವೇತ ವಸ್ತ್ರದಿಂದ
ನನ್ನವರಲ್ಲಿ ಮೆರ್ಯುತಿರ್ವನು
ನಾಜೀವಗ್ರಂಥಲೇಖದೊಳಗಿಂದ
ಅಂಥವನನ್ನು ಕಿತ್ತು ಹಾಕೆನು.
ಇಕೊಳ್ಳಿ ಅಲ್ಲಿ ಆ ದಿನದಲ್ಲಿ
ನಾ ನಿನ್ನ ಬಲ್ಲೆನೆಂತಂಬೆನು.
ನಾ ನಿನ್ನ ಬಲ್ಲೆನೆಂತಂಬೆನು.

Verse 6

ವಿಜೈಸುವಾತನನ್ನು ಸ್ತಂಭವಾಗಿ
ಪವಿತ್ರ ನನ್ನ ಗೃಹದೊಳಗೆ
ನಾನಿಟ್ಟು ಆತನಲ್ಲಿ ಘನಕಾಗಿ
ತ್ರಯೈಕ ದೇವ ನಾಮ ಕೆತ್ತುವೆ
ಮತ್ತೆನ್ನ ಸ್ವಂತ ನವೀನ ನಾಮ
ಶ್ರೀ ಪಟ್ಣನಾಮ ಲೇಖಿಸುವೆ.
ಶ್ರೀ ಪಟ್ಣನಾಮ ಲೇಖಿಸುವೆ.

Verse 7

ವಿಜೈಸುವಾತ ನನ್ನ ಪಾರ್ಶ್ವದಲ್ಲಿ
ಸಿಂಹಾಸನಕ್ಕೆ ಬಾದ್ಯನಾಗುವ
ನಾ ಜಯಗೊಂಡು ತಂದೆ ಪಕ್ಕದಲ್ಲಿ
ಕೂತಿರುವಂತೆ ನೀನೂ ಕೂಡ್ರ ಬಾ.
ಶ್ರೀ ಸಭೆಕೇಳು ಇಲ್ಲ್ಯಡ್ಡ ಬೀಳೂ
ಹೋರಾಟಕ್ಕೇಳು ವಿಜೈಸಿ ಬಾ.
ಹೋರಾಟಕ್ಕೇಳು ವಿಜೈಸಿ ಬಾ.

Go to top