Verse 1

ಮೈಬಣ್ಣವು ಕರಿದು ಬಿಸಲಿನಿಂದ
ಸತ್ ಕ್ರೈಸ್ತರ ಆತ್ಮವು ಮಿಂಚುವದು
ಮಹೋನ್ನತನವರಿಗೊಲುಮೆಯಿಂದ
ಕೊಟ್ಟೋಡವೆ ಪರರು ಅರಿಯರು.
ಮನುಷ್ಯನ ಜ್ಞಾನ
ಮನುಷ್ಯನ ಧ್ಯಾನ
ಎಂದೆಂದಿಗೂ ಹೊಂದದ ಪರಮದಾನ
ಯೆಹೋವನು ಇವರಿಗಿತ್ತಭಿಮಾನ.

Verse 2

ಈ ಲೋಕದಿ ಹೊರಗೆ ಬಡವರಾಗಿ
ಉನ್ನತ್ತರ ಹಾಸ್ಯವ ತಾಳುವರು.
ಅಂತರ್ಯದಿ ಕೃಪೆಯ ನಿಧಿಗಳಾಗಿ
ಕ್ರಿಸ್ತ್ಯೇಸುವಿಗಾಗೊರು ಮುಡಿಗಳು
ಮಹಾ ದಿನದಲ್ಲಿ
ದುಷ್ಟಾರಿಗಳಲ್ಲಿ
ಹೋರಾಡಿದ ಬಳಿಕ ಮಹಿಮೆಯಲ್ಲಿ
ಪ್ರವೇಶಿಸಿ ಹರ್ಷಿಪರರಸನಲ್ಲಿ.

Verse 3

ಹೀಗಾದರೂ ಕ್ರೈಸ್ತರು ಮಾನವರಾಗಿ
ಆದಾಮನ ರೂಪದಿ ಕಾಣಿಸೋರು
ಪಾಪಿಷ್ಠರ ಅಂದದಿ ದೇಹಿಗಳಾಗಿ
ಬೇಕಾಗಲು ಕುಡಿದು ಉಣ್ಣುವರು
ಕೀಳಾಳುಗಳಾಗಿ
ಸಾಧಾರಣವಾಗಿ
ಉದ್ಯೋಗದಿ ಬಾಳೊರು ನಂಬಿಕೆಯಾಗಿ
ದುರ್ಭೋಗದ ತ್ಯಾಗವ ಗೈದವರಾಗಿ.

Verse 4

ಅಂತರ್ಯದಿ ದೇವರ ವಚನದಿಂದ
ಅಮೂಲ್ಯ ಸ್ವಭಾವವು ಜನಿಸಿತು
ಪ್ರಕಾಶಿಪುದಮಲ ತೇಜಸ್ಸಿನಿಂದ
ಸದ್ಭಕ್ತರ ಹೃತ್ತಿನ ಕನ್ನಡಿಯು.
ಹೃಚ್ಚಿಂತೆಯ ತ್ಯಾಗ
ಸತ್ಪುತ್ರರ ಭಾಗ
ಯೆಹೋವನ ದಾನವು ಹೀಗಿರುವಾಗ
ಸಿಂಹಾಸನಕ್ಕೇರುವದುತ್ಸಹರಾಗ.

Verse 5

ಈ ಪೃಥ್ವಿಯಲ್ಲಿದ್ದರೂ ದ್ಯುಚರರಾಗಿ
ನಿತ್ರಾಣದಿ ಕಾಯುವರಿಳೆಯನು.
ಭೂಕಾಳಗದೊಳಗು ಶಾಂತರು ಆಗಿ
ಬೇಡ್ಯುಣ್ಣುವ ಧನಿಗಳೆನ್ನಿಸೊರು.
ಸ್ವಭಾವದ ಕ್ಷಯ
ವಿಶ್ವಾಸದ ಜಯ
ಶರೀರದ ಭೋಗಕೆ ಬಪ್ಪುದುಲಯ
ಜೀವಾತ್ಮದ ತೃಪ್ತಿಯು ದೇವರ ದಯ.

Verse 6

ಕ್ರಿಸ್ತ್ಯೇಸು ಪವಿತ್ರ ಪ್ರಕಾಶದ ದೊರೆ
ಅಗೋಚರ ಜೀವದ ಒಡೆಯನೇ
ನೀ ನಮಗೆ ಕೊಡುವ ಕ್ರೂಜೆಯ ಹೊರೆ
ಕುರೂಪವ ಮಾಡಲಿ ಮೃದ್ಘಟಕೆ
ಇಲ್ಲ್ಯಡಗಲಾಗಿ
ನೀನರಸನಾಗಿ
ಬಪ್ಪಾಗಲೆ ಮಹಿಮೆಯರಸರಾಗಿ
ನಿನ್ನಲ್ಲಿಯೆ ಇರ್ವೆವನಂತರವಾಗಿ.

Go to top