Verse 1

ಚೀಯೋನೇ ಚೀಯೋನೇ
ನೀನು ದೇವಸಭೆಯು.
ಇಕ್ಕಟ್ಟಾದ ದ್ವಾರದಿಂದ
ಸೇರಿ ಧೈರ್ಯವಾಗಿರು.
ನೆಟ್ಟಗಾದ ಹಾದಿಯಿಂದ
ನಡೆ ಏನೂ ಬೇಸರಾಗದೆ
ಮುಂದಕೆ ಮುಂದಕೆ.

Verse 2

ಚೀಯೋನೇ ಚೀಯೋನೇ
ಪರಿಶುದ್ಧ ಪಟ್ಣವೆ.
ಮಾಡಬೇಡ ಚಿಂತೆಯನ್ನು
ದುಷ್ಟ ಲೋಕ ಹಿಂಸೆಗೆ.
ಮುಂದಿನಾ ಕಿರೀಟವನ್ನು
ಸದ್ವಿಶ್ವಾಸದಿಂದ ನಿತ್ಯಕು
ದೃಷ್ಟಿಸು ದೃಷ್ಟಿಸು.

Verse 3

ಚೀಯೋನೇ ಚೀಯೋನೇ
ನೀನು ದೇವಗೃಹವು.
ಪಾಪಮಲಕಲೆಯೊಂದು
ನಿನ್ನಲಿರಬಾರದು.
ಯೇಸು ನಿನಗಾಗಿ ನೊಂದು
ತನ್ನ ಜೀವವನ್ನು ಸುಮ್ಮಗೆ
ಕೊಟ್ಟನೆ? ಕೊಟ್ಟನೆ?

Verse 4

ಚೀಯೋನೇ ಚೀಯೋನೇ
ನೀ ಪವಿತ್ರ ಕನ್ಯೆಯು.
ಯೇಸು ತನ್ನ ರಕ್ತವನ್ನು
ನಿನಗಾಗಿ ಹೊಯ್ದನು.
ನಿತ್ಯರಾಜ್ಯ ಸ್ವಾಸ್ತ್ಯವನ್ನು
ನಿಂಗನಾದಿ ತಂದೆ ದೇವರು
ಕೊಟ್ಟನು ಕೊಟ್ಟನು.

Verse 5

ಚೀಯೋನೇ ಚೀಯೋನೇ
ನೀನು ಜಯಶಾಲಿಯು.
ಯೇಸುವೆಂಬ ವೀರನನ್ನು
ನಂಬಿ ಧೈರ್ಯವಾಗಿರು.
ನಿನ್ನ ರಣಭೂಮಿಯನ್ನು
ಬಿಡದ್ಹೋರನಾಡು ಜಯವು
ನಿನ್ನದು ನಿನ್ನದು.

Go to top