Verse 1

ಕ್ರಿಸ್ತಾ ನಿನ್ನ ಭಕ್ತರನ್ನು
ಪ್ರೀತಿಯಿಂದ ಆಳಿಕೋ
ಪ್ರೀತಿಯಲ್ಲಿ ಸಭೆಯನ್ನು
ಪೂರ್ಣ ದೃಢ ಪಡಿಸೋ.

Verse 2

ನಿನ್ನ ಪ್ರೀತಿ ಸಭ್ಯರನ್ನು
ಐಕ್ಯದೊಳಗಿಡಲಿ
ಅಹಂಕಾರವೆಲ್ಲವನ್ನು
ಅದು ಸುಟ್ಟುಬಿಡಲಿ.

Verse 3

ನೀನೇ ಪ್ರೀತಿ ಪ್ರೀತಿಯಿಂದ
ಪ್ರಜೆಯೆಲ್ಲ ತುಂಬಲಿ
ಭಕ್ತಹೃದವೇದಿಯಿಂದ
ಪ್ರೀತಿ ಜ್ವಾಲೆ ಏಳಲಿ.

Verse 4

ನಮ್ಮ ಸಭೆ ಒಂದೇ ವಂಶ
ನಿನ್ನ ವಂಶ ಯೇಸುವೆ
ಒಂದೇ ರಕ್ತ ಒಂದೇ ಮಾಂಸ
ಒಂದೇ ಜೀವ ನಮಗೆ.

Verse 5

ಪ್ರೀತಿಯಿಂದ ನಿನ್ನ ಪ್ರಾಣ
ಕ್ರೂಜೆಯಲ್ಲಿ ಅರ್ಪಿಸಿ
ಸ್ವರ್ಗಕ್ಹೋಗಿ ವಾಸಸ್ಥಾನ
ನಮಗುಂಟು ಮಾಡಿದಿ.

Verse 6

ದಿವ್ಯ ಪ್ರೀತಿ ಸಭೆಯಲ್ಲಿ
ವಾಸ ಮಾಡು ನಿತ್ಯಕು
ನಿನ್ನ ಸ್ವರ್ಗ ರಾಜ್ಯದಲ್ಲಿ
ನಮ್ಮನೆಲ್ಲ ಸೇರಿಸು.

Go to top