Verse 1

ದೇವರ ಕುಮಾರರು
ಘನವುಳ್ಳ ಕೂಟವು
ಒಂದೆ ಶುದ್ಧ ಸಭೆಯು
ಸದ್ವಿಶ್ವಾಸ ಭಕ್ತರು.

Verse 2

ಯೇಸು ಕ್ರಿಸ್ತ ನೀತಿಯು
ಅವರಲಂಕಾರವು
ಯೇಸು ಪಟ್ಟ ಬಾಧೆಯು
ಅವರಾತ್ಮಸುಖವು.

Verse 3

ಎಲ್ಲ ಕುಲ ಪ್ರಜೆಯೊಳ್
ಎಲ್ಲ ಪ್ರಾಂತ್ಯ ದೇಶದೊಳ್
ಮಿತ್ರರನ್ನು ಮಿತ್ರರು
ನೋಡಿಕೊಳ್ಳಲಾಗದು.

Verse 4

ಈ ಸಮಸ್ತ ಶಿಷ್ಯರು
ಕ್ರಿಸ್ತನೊಂದೇ ಸಭೆಯು
ಆತನಲ್ಲಿ ಭ್ರಾತ್ರರು
ದೇವರೊಳ್ಳೆ ಮಕ್ಕಳು.

Verse 5

ಯೇಸು ತನ್ನ ಮಂದೆಯ
ಅರಿಯೋನು ನಿಶ್ಚಯ
ಇವರೆಂದಿಗಾದರು
ನಾಶವಾಗಕೂಡದು.

Verse 6

ನಿನ್ನ ಪ್ರೇಮದಗ್ನಿಯು
ನಮ್ಮಲುರಿಗೊಳ್ಳಲು
ನಾವು ನಿನ್ನ ಶಿಷ್ಯರು
ಎಂದು ಲೋಕ ನಂಬೋದು.

Go to top