Verse 1

ಗುಡ್ಡದಲ್ಲಿ ಕಾಡಿನಲ್ಲೆ
ದಣಿದ
ಹಸಿದ
ಲಕ್ಷ ಕುರಿ ಬಲ್ಲೆ.
ಅಯ್ಯೋ ತಪ್ಪಿ ಹೋಗಿದ್ದಾವೆ
ಸಾಕುವ
ಕುರುಬ
ಇಲ್ಲದಿರುತಾವೆ.

Verse 2

ಯೇಸು ಕ್ರಿಸ್ತ ಅಹೋರಾತ್ರ
ಜೋಕೆಯ
ಮಾಡುವ
ಮಂದೆ ಒಂದು ಮಾತ್ರ.
ಒಂದನ್ನಾದುಕೊಂಡಿದ್ದಾನೆ
ಅದನ್ನೆ
ಮುಂದೆಯೆ
ಹೋಗಿ ಮೆಯ್ಸುತಾನೆ.

Verse 3

ನಮ್ಮ ನಾಮ ಸಹ ಬಲ್ಲ
ನಮ್ಮನು
ನಿತ್ಯಕು
ಸಾಕುತಾನೆ ಅಲ್ಲ?
ಆತನಂ ಹಿಂಬಾಲಿಸೋಣ
ಕ್ಷೇಮವು
ಸಿಕ್ಕೋದು
ಹಾಡಿ ಹರಸೋಣ.

Verse 4

ನೀನೇ ನಮ್ಮ ಯಜಮಾನ
ಯೇಸುವೆ
ನಮಗೆ
ಕೊಡು ಸಮಾಧಾನ.
ಅಂತ್ಯದಲ್ಲಿ ನಿನ್ನ ಪ್ರಭೆ
ತೋರುವ
ತನಕ
ಕಾಯಿ ನಿನ್ನ ಸಭೆ.

Go to top