Verse 1

ಶ್ರೀ ಸಭೆಗಸ್ತಿವಾರ
ಕ್ರಿಸ್ತ್ಯೇಸುವೊಬ್ಬನೇ
ಅದನ್ನು ಸೇರೋ ದ್ವಾರ
ಪವಿತ್ರ ಸ್ನಾನವೇ.
ಸಂರಕ್ಷೆಗಿತ್ತಾಹಾರ
ಪವಿತ್ರ ವಾಕ್ಯವು
ವಿಮುಕ್ತಿ ಸಂಚಕಾರ
ಪವಿತ್ರ ಆತ್ಮನು.

Verse 2

ನಾನಾ ಪ್ರದೇಶದಿಂದ
ನಾವಾಯಲ್ಪಟರು
ಒಂದೇ ದೇಹಾನುಬಂಧ
ಅವಯವಂಗಳು.
ನಾವೆಲ್ಲ ಒಂದೇ ವಂಶ
ಕ್ರಿಸ್ತ್ಯೇಸುವಂಶವೇ
ನಾವೆತ್ತುವಂಥ ನಾಮ
ಕ್ರಿಸ್ತ್ಯೇಸುನಾಮವೇ.

Verse 3

ಕ್ರಿಸ್ತ್ಯೇಸುವಿನ ಸಾಕ್ಷಿ
ಸತ್ಸಭೆ ಉಸುರಿ
ಭುರಣರಂಗದಲ್ಲಿ
ವಾಕ್ಖಡ್ಗ ಧರಿಸಿ
ಹೋರಾಡಿ ಸಲೆ ಗೆದ್ದು
ವಿಶ್ರಾಂತಿಗೇರ್ವದು.
ಆಗೆಲ್ಲ ದಿಗ್ವಿಜಯ
ಶ್ರೀ ಕ್ರಿಸ್ತಗಾಗೊದು.

Verse 4

ಮುಂದ್ಹೋದ ಭಕ್ತರೆಲ್ಲ
ತ್ರಯ್ಯೆಕ ದೇವರ
ಸಾಲೋಕ್ಯಭಾಗ್ಯವನ್ನು
ಹೊಂದಿರ್ವರಹಹ.
ನಾವಿನ್ನು ಪಡುತ್ತೇವೆ
ಉಷ್ಣಾದಿ ತಾಪವ.
ವಿಮುಕ್ತಿ ಮಾಡು ಕರ್ತ
ಈ ನಿನ್ನ ಸಭೆಯ.

Go to top