Verse 1

ನಾವೆಲ್ಲ ಕೂಡಿ ಹಾಡುವ
ದೇವರು ಪ್ರೀತಿಯೇ.
ಭೂಪರಲೋಕಗಾಯನ
ದೇವರು ಪ್ರೀತಿಯೇ.
ಪಾಪಾತ್ಮರೆಲ್ಲಾ ಬನ್ನಿರಿ
ಇಂಪಾದ ರಾಗ ಬಾರಿಸಿ
ಸಂಭ್ರಮದಿಂದ ಹಾಡಿರಿ
ದೇವರು ಪ್ರೀತಿಯೇ.

Verse 2

ಓ ಸಾರಿರೆಲ್ಲ ಜನಕ್ಕೂ
ದೇವರು ಪ್ರೀತಿಯೇ.
ಸಂರಕ್ಷಕನ್ನ ಕೊಟ್ಟನು
ದೇವರು ಪ್ರೀತಿಯೇ.
ಕ್ರಿಸ್ತ್ಯೇಸುವಿನ ರಕ್ತವು
ಸಮಸ್ತ ಪಾಪ ತೊಳೆದು
ನಮ್ಮನ್ನು ಶುಭ್ರ ಮಾಡಿತು
ದೇವರು ಪ್ರೀತಿಯೇ.

Verse 3

ಎಷ್ಟೋ ಸಂತೋಷವಾಯಿತು
ದೇವರು ಪ್ರೀತಿಯೇ.
ಯೆಹೋವ ನಮ್ಮ ತಂದೆಯು
ದೇವರು ಪ್ರೀತಿಯೇ.
ಗುರಾಣಿ ಸೂರ್ಯ ಸಂಪತ್ತು
ಆಶ್ರಯ ಕೋಟೆ ದುರ್ಗವು
ಅನಂತ ಭಾಗ್ಯವಾತನು
ದೇವರು ಪ್ರೀತಿಯೇ.

Verse 4

ಈ ದೇಹ ಕ್ಷೀಣವಾದರೂ
ದೇವರು ಪ್ರೀತಿಯೇ.
ಹೃದಯ ಕುಂದಿ ಹೋದರೂ
ದೇವರು ಪ್ರೀತಿಯೇ.
ಭೂಲೋಕಯುದ್ಧದೊಳಗೆ
ಅಘೋರ ಮೃತ್ಯುಗಳಿಗೆ
ಬಂದಾಗ್ಯು ಆಗದಂಜಿಕೆ
ದೇವರು ಪ್ರೀತಿಯೇ.

Go to top