Verse 1

ಯೆಹೋವನೆಮ್ಮ ಕುರುಬ
ಕುಂದೇನು ನನಗೆ?
ತಣ್ಣೀರ ತಗ್ಗಿಗಹಹ
ಹಚ್ಚಾನ ದಿನ್ನೆಗೆ
ನನ್ನನ್ನು ಬಿಟ್ಟು ಕಾಯುವ
ನನ್ನೊಳ್ಳೆ ಕುರುಬ.

Verse 2

ಆಯಾಸ ಪಟ್ಟ ಕುರಿಗೆ
ವಿಶ್ರಾಂತಯಿಯುವ
ಸಂಕಷ್ಟ ಬಂದರದಕೆ
ಸಹಾಯಕ್ಕೋಡುವ.
ನಿತ್ರಾಣ ಮರಿ ಹಟ್ಟಿಗು
ಕೈಯಲ್ಲಿ ಒಯ್ವನು.

Verse 3

ಸಾವೆಂಬ ಕಪ್ಪು ಕೊಳ್ಳದಿ
ನಾ ಹಾಯ ಸೇರಲು
ನೀನೆನ್ನ ಕೂಡ ಸಾಗುವಿ
ಪಿಶಾಚಿಗಂಜೆನು
ನಿಂಗಿಪ್ಪ ದಂಡವೆನಗೆ
ಅಭಯ ಕೊಡುತೆ.

Verse 4

ಮೇಲಾದ ಹಬ್ಬದೂಟಕೆ
ನೀನೆನ್ನ ಕರಿಸಿ
ಸುತೈಲವೆನ್ನ ಮಂಡೆಗೆ
ಚೆನ್ನಾಗಿ ಹಚ್ಚುವಿ.
ಈ ಭಾಗ್ಯವನ್ನು ಶತ್ರುವು
ಕಂಡಾಗ್ಯು ಹೊಂದನು.

Verse 5

ಯೆಹೋವ ಎಲ್ಲ ಕಾಲಕು
ನಿನ್ನಾಶೀರ್ವಾದವೆ
ನನ್ನಲ್ಲಿ ಕಂಡು ಬಪ್ಪುದು
ಸಂತೃಪ್ತನಾಗುವೆ
ನಿನ್ನೊಂದಿಗಿಹದಲ್ಲಿಯು
ನಿನ್ನೊಂದಿಗಲ್ಲಿಯು.

Go to top