Verse 1

ಭೂಲೋಕಕ್ಕೀಶ ಮಾಡಿದ
ಸಂಪ್ರೀತಿಗೀಡು ಇಲ್ಲ.
ತಾ ಕಂಡು ದ್ರೋಹಜಾತಿಯ
ಉಪೇಕ್ಷೆ ಮಾಡಲಿಲ್ಲಿ.
ಈ ಪ್ರೀತಿಯಂತವರಿತು
ದಯಾಬ್ಧಿನೆಲ ಕಾಣಲು
ಸಾಮರ್ಥ್ಯ ಯಾರಿಗುಂಟು?

Verse 2

ಅಸಹ್ಯ ಪಾಪಮಲದಿ
ದೇವಾರಿಲೋಕ ಬಿತ್ತು
ಆದಾಗ್ಯು ತಂದೆ ಒಲ್ಮೆಲಿ
ಕಟಾಕ್ಷ ಪೂರ್ತಿಯಿತ್ತು
ವಿಮುಕ್ತಿ ಮಾಡುವದಕೆ
ಕೆಟ್ಠೋದ ಪಾಪಿ ಜಾತಿಗೆ
ಕುಮಾರನನ್ನು ಕೊಟ್ಟ.

Verse 3

ಕುಮಾರನನ್ನು ಲೋಕವು
ತಾತ್ಸಾರ ಮಾಡಿತಲ್ಲ
ಆದಾಗ್ಯು ಶಿಕ್ಷೆ ತಡೆದು
ತನ್ನಾತ್ಮ ಕೊಟ್ಟನಲ್ಲ.
ಹಾ ದೀರ್ಘಶಾಂತ ದೇವರೇ
ನಿನ್ನತಿಶಯ ಕೃಪೆಗೆ
ಸಾಷ್ಟಾಂಗ ನಮಸ್ಕಾರ.

Go to top