Verse 1

ಯೆಹೋವನೇ
ಸಮಸ್ತ ಸೃಷ್ಟಿಯಿಂದ
ಸನ್ಮಾನ ಹೊಂದ ಯೋಗ್ಯನೇ
ನಾನಾದರೂ ಮಹಾ
ಸಂತೋಷದಿಂದ
ಸಂಗೀತ ನಿನಗೆತ್ತುವೆ.

Verse 2

ಸರ್ವೇಶನೇ
ಅನಾದಿಯಿಂದಿದ್ದಾತ
ನೀನೆಲ್ಲ ಉಂಟುಮಾಡಿದಿ
ಸಮಸ್ತವಂ ಸದಾ
ನೀನಾಳುವಾತ
ನನ್ನನ್ನು ನೀನೇ ಆಳುವಿ.

Verse 3

ಇಮ್ಮಾನುವೇಲ್
ನಾ ಕೆಟ್ಟು ಬೀಳುವಲ್ಲಿ
ನೀನೊಲಿದವತರಿಸಿ
ಈ ನನ್ನ ಫೋರ
ಪಾಪಯುದ್ಧದಲ್ಲಿ
ನೀ ನನಗಾಗಿ ಜೈಸಿದಿ.

Verse 4

ಯೊಹೋವನೇ
ನೀನಿನ್ನು ಬರುವಾತ
ಗಂಭೀರ ನ್ಯಾಯತೀರ್ಪಿಗು
ಅಂದೆನಗಿದ್ದು
ನೀ ಸಂಜೀವದಾತ
ಕಲ್ಯಾಣದಲ್ಲಿ ಸೇರಿಸು.

Go to top