Verse 1

ನನ್ನ ದೇವ ಪ್ರೀಯ ತಂದೆ
ಬಡ ಬಾಲ ನಾನು ಬಂದೆ
ಕರ್ತ ಆದಿವಸ್ತುವೆ
ನಿನ್ನ ಮುಂದೆ ವಂದಿಪೆ.

Verse 2

ದೂತಗಣ ಘನದಿಂದ
ಸ್ತೋತ್ರ ಮಾಡೋ ಕಡೆಯಿಂದ
ನೀನು ಕೃಪಾನೇತ್ರದಿ
ಧೂಳಿಯೆನ್ನ ನೋಡುತಿ.

Verse 3

ದೇವಗೃಹ ದಿವದ್ವಾರ
ಅವಿಶ್ವ್ವಾಸಿ ಕಾಣಲಾರ.
ನಿಂಗೆ ದುರವಾದೆನೈ
ಎಷ್ಟೋ ಭ್ರಾಂತಿಯಾಯಿತೈ.

Verse 4

ಕೆಟ್ಟ ಲೋಕದಾಶೆಯಿಂದ
ಇನ್ನು ನಿನ್ನ ಐಕ್ಯದಿಂದ
ಅಗಲಿರಲಾರೆನು
ನನ್ನ ಪ್ರಾಣ ರಕ್ಷಿಸು.

Verse 5

ಬುದ್ಧಿ ಬಂತು ಕಡೆಯಲ್ಲಿ
ನಿನ್ನ ಸನ್ನಿಧಾನದಲ್ಲಿ ಸೇರಿ
ಪ್ರಿಯ ತಂದೆಯೆ
ನಿತ್ಯಜೀವ ಹೊಂದಿದೆ.

Verse 6

ಕೃಪೆಯಿಂದ ಕ್ಷಮೆಯನ್ನು
ಕೃಪೆಯಿಂದ ಜೀವವನ್ನು
ಪಡಕೊಂಡೆ ದೇವರೇ
ನನ್ನ ಗತಿ ಕೃಪೆಯೇ.

Go to top