Verse 1

ಸ್ವರ್ಗೀಯ ಮೇಳವು
ಸಮಸ್ತ ದೂತರು
ಕೆರೂಬ್ ಸೆರಾಫರು
ಯೆಹೋವನನ್ನು ಸ್ತುತಿಸಿ
ಗಂಭೀರವಾಗಿ ಕೀರ್ತಿಸಿ.
ಶುದ್ಧ ಶುದ್ಧ ಶುದ್ಧ
ನಮ್ಮೊಡೆಯಾ
ಎಂದ್ಹಾಡುತ್ತಾರಹಾ.

Verse 2

ಸಂಸಿದ್ಧ ಭಕ್ತರು
ಬಂಗಾರ ಬಾಗಲು
ಪ್ರವೇಶ ಮಾಡಲು
ಶ್ರೀ ಶುಭ್ರವಸ್ತ್ರ ಧರಿಸಿ
ಆ ಧನ್ಯ ಮೇಳ ಕೀರ್ತಿಸಿ.
ಶುದ್ಧ ಶುದ್ಧ ಶುದ್ಧ
ನಮ್ಮೊಡೆಯಾ
ಎಂದ್ಹಾಡುತ್ತಾರಹಾ.

Verse 3

ನಮ್ಮಲ್ಪ ಸಭೆಯು
ಕನಿಷ್ಠ ಸ್ಥಾನದ್ದು
ಧೂಳೀಲಿ ಬಿದ್ದದ್ದು
ಸ್ವರಕ್ತದಿಂದ ಬಿಡಿಸಿ
ಕೊಂಡಾತನನ್ನು ಕೀರ್ತಿಸಿ.
ಶುದ್ಧ ಶುದ್ಧ ಶುದ್ಧ
ನಮ್ಮೊಡೆಯಾ
ಎಂದ್ಹಾಡುತ್ತೇವಹಾ.

Go to top