Verse 1

ಇನ್ನು ನಿತ್ಯಾರಾಮವು
ನಮ್ಮ ಕರ್ತನಿಂದ
ಎಲ್ಲ ದೇವಸಭೆಗು
ಸಿಕ್ಕುವದರಿಂದ
ದುಃಖವುಳ್ಳ ಆತ್ಮವೇ
ಚಿಂತೆಯನ್ನು ಬಿಡು
ಯೇಸು ಕ್ರಿಸ್ತನಲ್ಲಿಯೇ
ದೃಢ ನಂಬಿಕಿಡು.

Verse 2

ನಮ್ಮ ಪ್ರಿಯ ರಕ್ಷಕ
ನಮ್ಮ ಹೊರೆಯನ್ನು
ತಾನು ಹೊತ್ತು ಮಾಡಿದ
ಪರಿಹಾರವನ್ನು.
ಯೇಸು ನಮ್ಮ ವೈರಿಯ
ತಾನೆ ಸತ್ತು ಗೆದ್ದ
ನಮ್ಮ ನೀತಿಗೂೀಸ್ಕರ
ಮೃತಿಯಿಂದ ಎದ್ದ.

Verse 3

ನಮ್ಮ ನಿತ್ಯಜೀವವು
ಯೇಸುನಾಥದಾನ
ಯೇಸುನಾಥರಕ್ತವು
ನಮ್ಮ ಸಮಾಧಾನ
ನಮ್ಮ ಪಾಪಸಾಲವು
ಆತನಿಂದ ಸಂತು.
ದೇವರಾತ್ಮವೊಲೆದು
ನಮ್ಮಲಿರ ಬಂತು.

Verse 4

ಚಿಂತೆ ಪಡುವವರೆ
ಚಿಂತೆಯೆಲ್ಲ ಬಿಟ್ಟು
ನಿಮ್ಮ ಪೂರ್ಣ ಕೋರಿಕೆ
ಯೇಸುವಲ್ಲಿ ಇಟ್ಟು
ನಿತ್ಯಜೀವಮಾಲೆಯ
ನೋಡಿ ಧೈರ್ಯ ತನ್ನಿ
ಆ ಸುವರ್ಣಪಟ್ಟಣ
ಸೇರ ಓಡಿ ಬನ್ನಿ.

Go to top