Verse 1

ಶ್ರೀ ಯೇಸು ಅಂದ ನನಗೆ
“ಬಾ ಬಾ ವಿಶ್ರಮಿಸು.
ನನ್ನೇದೇ ಮೇಲೆ ಮಗನೆ
ಆಯಾಸ ತೀರಿಸು.”
ನಾನಿದ್ದಪ್ಪಂದ ಬಂದೆನು
ಪಾಪತ್ಮನಾಗಿಯೆ
ವಿಶ್ರಮವನ್ನು ಕೊಟ್ಟನು
ಆ ನೊಂದ ಆತ್ಮಕೆ.

Verse 2

ಶ್ರೀ ಯೇಸು ಅಂದ ನನಗೆ
“ನೀ ಪಾನ ಮಾಡಿಕೋ.
ನಾ ಜೀವಜಲ ಬುಗ್ಗೆಯೇ
ನೀ ಬಂದು ಸೇದಿಕೋ.”
ಈ ಜೀವಜಲ ಬುಗ್ಗೇಲಿ
ನಾ ಸೇದಿಕೊಳ್ಳಲು
ನನ್ ದಾಹ ತೀರಿ ಮನದಿ
ಸಂತೃಪ್ತನಾದೆನು.

Verse 3

ಶ್ರೀ ಯೇಸು ಅಂದ ನನಗೆ
“ನನ್ನನ್ನು ದೃಷ್ಟಿಸು.
ಕಾರ್ಗತ್ತಲಾದ ಲೋಕಕೆ
ನಾ ನೀತಿಸೂರ್ಯನು.”
ನಾ ದೃಷ್ಟಿಯಿಟ್ಟಾಕ್ಷಣವೇ
ಪ್ರಕಾಶ ಕಂಡೆನು
ಹೌದಿಂದೂ ಎಂದೂ ಯೇಸುವೇ
ನೀ ನನ್ನ ಜ್ಯೋತಿಯು.

Go to top