Verse 1

ದೇವರಾಶೀರ್ವಾದದಿಂದ
ಬಾಳು ಸೊತ್ತು ಸಿಕ್ಕುತೆ.
ನನ್ನ ಸ್ವಂತ ಯತ್ನವೆಲ್ಲ
ಪೂರ್ಣವಾಗಿ ವ್ಯರ್ಥವೆ.
ಬುದ್ಧಿ ಬಲ ಕಾಲ ಸೊತ್ತು
ಕರ್ತ ತಾನೆ ಕೊಟ್ಟದು.
ಇದು ನನ್ನ ಸ್ವಂತವೆಂದು
ಯಾರು ಹೇಳಕೂಡದು.

Verse 2

ಹತ್ತರಲ್ಲಿ ಒಂದು ಪಾಲು
ದೇವಭಾಗವಾಗಿದೆ.
ಹೀಗೆ ಕೊಡುವಂತೆ ಆತ
ಆಜ್ಞೆ ಕೊಡಲಿಲ್ಲವೆ?
ಪೂರ್ಣ ಮನದಿಂದದನ್ನು
ನಾನು ಕೊಡತಕ್ಕದ್ದು.
ಆತ ಕೊಟ್ಟ ನೇಮವನ್ನು
ಎಂದೂ ಮಿರಬಾರದು.

Verse 3

ದೇವರಾಜ್ಯ ಬರುವಂತೆ
ನಾವು ಚಿಂತೆ ಮಾಡಲು
ಅದಕ್ಕಾಗಿ ನಮ್ಮ ತ್ರಾಣ
ದ್ರವ್ಯ ಕೊಡತಕ್ಕದ್ದು.
ಎಲ್ಲವನ್ನು ಕರ್ತಗಾಗಿ
ಕೊಡಬೇಕು ನ್ಯಾಯವೇ?
ಸ್ವಲ್ಪ ಭಾಗ ಆತಗಾಗಿ
ಕೊಡುವದಕ್ಕಾಗದೇ?

Verse 4

ಯೇಸು ಕ್ರಿಸ್ತ ಲೋಭಿಯನ್ನು
ಎಂದೂ ಮೆಚ್ಚಲಾರನು.
ಋಣ ತೆರುವಾತನನ್ನು
ಆಶೀರ್ವದಿಸುವನು.
ಇನ್ನು ಹೆಚ್ಚು ಕೊಡುವಾತ
ನಷ್ಟ ಹೊಂದಲಾರನು.
ಹೆಚ್ಚು ಮೇಲು ದೇವರಿಂದ
ನಿಜವಾಗಿ ಹೊಂದ್ವನು.

Go to top