Verse 1

ಕ್ರೈಸ್ತನೇ ಯೆಹೋವನನ್ನು
ಮನಃಪೂರ್ಣ ಸ್ತುತಿಸು.
ಬೇರೆ ಯಾವ ಹೆಸರನ್ನು
ಎತ್ತ ಬೇಡ ಆತನು
ಯೋಗ್ಯನು ಯ್ಯೋಗ್ಯನು.

Verse 2

ಕ್ರೈಸ್ತನೇ ನೀ ಮಾಡುಧ್ಯಾನ
ಗಾಳಿ ಮಳೆ ಬೆಳೆಯು.
ನಿನಗಾತನಿತ್ತ ದಾನ
ದೊಡ್ಡ ಉಪಕರವು
ಸ್ಮರಿಸು ಸ್ಮರಿಸು.

Verse 3

ಕ್ರೈಸ್ತನೇ ನೀ ಸಮಾಧಾನ
ಜೀವ ಕ್ಷೇಮ ಕಸಬು.
ಅನುದಿನದನ್ನಪಾನ
ಹೊಂದಿದ್ದಾರ ದಯವು?
ಧ್ಯಾನಿಸು ಧ್ಯಾನಿಸು.

Verse 4

ಕ್ರೈಸ್ತನೇ ನೀನುಪಕಾರ
ಹೊಂದಿ ಪ್ರತಿದಾನ ತಾ.
ಬುದ್ಧಿ ಚಿತ್ತ ಸದಾಚಾರ
ಆಯದ್ದೊಂದು ಭಾಗವ
ಅರ್ಪಿಸು ಅರ್ಪಿಸು.

Verse 5

ಕ್ರೈಸ್ತನು ತಾ ಡಂಭಾಚಾರ
ಮೊದಲಾದ ಸ್ವಾರ್ಥಕೆ
ಆಸ್ತಿ ವೆಚ್ಚ ಮಾಡಲಾರ
ಕರ್ತ ಲೆಕ್ಕ ಕೇಳನೆ?
ಯೋಚಿಸು ಯೋಚಿಸು.

Go to top