Verse 1

ರಕ್ಷಕನೇ ಚೈತನ್ಯದಾತ ಕರ್ತ
ತಾರಕನೇ ಸಮಸ್ತ ವಿಶ್ವಭರ್ತ
ಕೇಳೆಮ್ಮ ಕೂಗು ಕೊಡು ಪರಮಾರ್ಥ
ನೀ ಸರ್ವತ್ರಾಣಿ.

Verse 2

ನಾವೆಯ ಸುತ್ತು ತೆರೆ ಏಳುವಾಗ
ಮಂದೆಯ ನುಂಗ ತೋಳ ಬರುವಾಗ
ದುರ್ವೈರಿ ಅಗ್ನಿಬಾಣ ಹೂಡುವಾಗ
ರಕ್ಷಿಸೆಮ್ಮನು.

Verse 3

ಆಶ್ರಯ ಕಾಣದಿರೆ ನೀನಾಶ್ರಯ
ನಿನ್ನಿಂದ ಆಯ್ತು ಪಾಪವಿಷ
ಲಯ ಇನ್ನ್ಯಾಕೆ ಮೃತ್ಯ ನರಕಾದಿ ಭಯ?
ಈಯ್ ಸಮಾಧಾನ.

Verse 4

ಸೋಲಿಸು ಭಕ್ತಸಭೆ ಕಾಡೋಜನ
ಕ್ಷಮಿಸು ಸತ್ಯಕ್ಕೊಪ್ಪಿದವರನ್ನು
ವರ್ಧಿಸು ರಾಜ್ಯ ಸೇರಿಸು ನಮ್ಮನ್ನು
ಸ್ವರ್ಗಸೌಭಾಗ್ಯ.

Go to top